×
Ad

ಡಿ. 20ರಿಂದ ಮಂಜನಾಡಿ ಉರೂಸ್

Update: 2023-12-15 18:13 IST

ಕೊಣಾಜೆ: ಹಝ್ರತ್ ಅಸ್ಸಯ್ಯಿದ್ ಇಸ್ಮಾಯಿಲ್ ಅಲ್-ಬುಖಾರಿ ಹೆಸರಿನಲ್ಲಿ ಎರಡು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿರುವ ಮಂಜನಾಡಿ ಉರೂಸ್ ಸಮಾರಂಭ ಡಿ. 20ರಿಂದ 30ತನಕ ನಡೆಯಲಿದ್ದು ಶುಕ್ರವಾರ ಮಂಜನಾಡಿ ಜುಮಾ ಮಸೀದಿ ಮುದರ್ರಿಸ್ ಪಿ‌.ಎ ಅಹ್ಮದ್ ಬಾಖವಿ ಧ್ವಜಾರೋಹಣಗೈದು ಮಂಜನಾಡಿ ಉರೂಸ್ ಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಬಹಳಷ್ಟು ಇತಿಹಾಸವಿರುವ ಮಂಜನಾಡಿ ಉರೂಸ್ ಈ ವರ್ಷ ಎಲ್ಲರ ಸಹಕಾರದೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ‌ ಎಂದು ಹೇಳಿದರು.

ನರಿಂಗಾನ ಗ್ರಾ.ಪಂ ಅಧ್ಯಕ್ಷ ನವಾಝ್ ನರಿಂಗಾನ, ಮಂಜನಾಡಿ ಜುಮಾ‌ ಮಸೀದಿ ಪ್ರ.ಕಾರ್ಯದರ್ಶಿ ಅಬ್ದುಲ್‌ ಅಝೀಝ್ ಪರ್ತಿಪ್ಪಾಡಿ, ಉಪಾಧ್ಯಕ್ಷ ಬಸರ ಮೊಹಿದ್ದೀನ್ ಹಾಜಿ, ಜೊತೆ ಕಾರ್ಯದರ್ಶಿಗಳಾದ ಎನ್‌.ಐ ಮೊಹಮ್ಮದ್, ಬಾಪ ಕುಂಞಿ, ಹಮೀದ್ ಆರಂಗಡಿ, ಮಾಜಿ ಅಧ್ಯಕ್ಷ ಆಲಿ ಕುಂಞಿ ಹಾಜಿ ಪಾರೆ, ಸಹಾಯಕ ಮುದರ್ರಿಸ್ ಮಸೂದ್ ಸಅದಿ, ಸಮಿತಿ ಸದಸ್ಯರಾದ ಎ‌.ಇ ಇಬ್ರಾಹಿಂ, ಕಲ್ಕಟ್ಟ ಅಬ್ದುರ್ರಹ್ಮಾನ್ ರಝ್ವಿ, ಟಿ. ಕುಂಞಿ, ಇಬ್ರಾಹಿಂ ಇಬ್ಬಾ, ಕುಂಞಿ ಚೌಕ, ಬಾವಿಚ್ಚ ಮುತ್ತಹಿತ್ಲು , ಉಮರ್ ಮೊರ್ಲ, ಮುನೀರ್ ಬಾವ, ಜಮಾಅತ್ ಸದಸ್ಯರಾದ ಮುನೀರ್ ಬಸರ, ಅಶ್ರಫ್ ಬಸರ, ನವಾಝ್ ಎ.ಇ, ಅಶ್ರಫ್ ಮೈಸೂರು,‌ ಕೆ.ಜೆ ಇಬ್ರಾಹೀಂ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News