ಸುಳ್ಯ: ಸರಕಾರಿ ಬಸ್‍ಗಳ ಮಧ್ಯೆ ಅಪಘಾತ: 20ಕ್ಕೂ ಅಧಿಕ ಮಂದಿ ಪ್ರಯಾಣಿಕರಿಗೆ ಗಾಯ
ಸುಳ್ಯ: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಕಾರು ಬಳಿ ಕೆಎಸ್‍ಆರ್‍ಟಿಸಿ ಬಸ್‍ಗಳ ಮಧ್ಯೆ ಸಂಭವಿಸಿದ ಅಪಘಾತದಲ್ಲಿ 20 ಅಧಿಕ ಮಂದಿ ಪ್ರಯಾಣಿಕರು ಗಾಯಗೊಂಡ ಘಟನೆ ಗುರುವಾರ ನಡೆದಿದೆ.
ಧರ್ಮಸ್ಥಳದಿಂದ ಮೈಸೂರಿಗೆ ಹೋಗುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ಹಾಗೂ ಸುಳ್ಯದಿಂದ ಪುತ್ತೂರಿನ ಕಡೆಗೆ ಹೋಗು ತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ಮಧ್ಯೆ ಅಡ್ಕಾರು ಬಸ್ಸು ತಂಗುದಾಣ ಸಮೀಪ ಅಪಘಾತ ಸಂಭವಿಸಿದೆ. ಸುಮಾರು 20ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ನೀಡಲಾಗಿದೆ.
ಕಲ್ಲುಗುಂಡಿ ನಿವಾಸಿ ಅನುರಾಧ ಎಂಬ ಮಹಿಳೆಗೆ ತಲೆ ಮತ್ತು ಮುಖದ ಭಾಗಕ್ಕೆ ಗಂಭೀರ ಗಾಯವಾಗಿದೆ. ದೊಡ್ಡತೋಟ ನಿವಾಸಿ ಮೇಘನಾ ಎಂಬ ಯುವತಿಗೆ ತಲೆಯ ಭಾಗಕ್ಕೆ, ಪೆರಾಜೆಯ ಬಾಲಚಂದ್ರ ಹಾಗೂ ಪುಂಡರಿಕ ಎಂಬುವವರ ತಲೆ ಹಾಗೂ ಮೂಗು, ತುಟಿಯ ಭಾಗಕ್ಕೆ ಗಾಯವಾಗಿದೆ. ಅದೇ ರೀತಿ ಜುಬೈದ ಎಂಬುವರ ತಲೆ ಮತ್ತು ಹಲ್ಲಿಗೆ, ರವೀಂದ್ರ ಪುತ್ತೂರು ಇವರಿಗೆ ಮೂಗು ಮತ್ತು ಹಲ್ಲಿನ ಭಾಗಕ್ಕೆ ಗಾಯವಾಗಿದ್ದು ಮಡಿಕೇರಿ ನಿವಾಸಿ ವಿದ್ಯಾ ಎಂಬವರ ತಲೆಗೆ ಪೆಟ್ಟಾಗಿದೆ. ಹಳೇಗೇಟು ನಿವಾಸಿ ಲಲಿತರಿಗೆ ತುಟಿ ಹಾಗೂ ಹಲ್ಲಿನ ಭಾಗಕ್ಕೆ ಗಾಯ ಗಳಾಗಿವೆ. ಬಸ್ಸಿನಲ್ಲಿ ಕಾಲೇಜು ವಿದ್ಯಾರ್ಥಿಗಳು ಕೂಡ ಇದ್ದು ಕೆಲವು ವಿದ್ಯಾರ್ಥಿಗಳಿಗೂ ಕೂಡ ಸಣ್ಣಪುಟ್ಟ ಗಾಯ ವಾಗಿದೆ. ಗಾಯಾಳುಗಳನ್ನು ಬೇರೆ ಬೇರೆ ವಾಹನಗಳಲ್ಲಿ ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಕೆಎಸ್‍ಆರ್‍ಟಿಸಿ ಡಿಪೊ ಅಧಿಕಾರಿಗಳು ಭೇಟಿ ನೀಡಿ ಗಾಯಾಳುಗಳ ಬಗ್ಗೆ ಪರಿಶೀಲನೆ ನಡೆಸಿದರು. ಸುಳ್ಯ ಠಾಣೆಯಲ್ಲಿ ಕೇಸು ದಾಖಲಾಗಿದೆ.