×
Ad

ಕಲ್ಲಡ್ಕ ಸ್ನೇಹ ಸಮ್ಮಿಲನ ಒಕ್ಕೂಟದಿಂದ "ಸ್ನೇಹ ಸಮ್ಮಿಲನ 2024"

Update: 2024-02-06 20:35 IST

ಬಂಟ್ವಾಳ : ಕಲ್ಲಡ್ಕದ ಸ್ನೇಹ ಸಮ್ಮಿಲನ ಒಕ್ಕೂಟ ಇದರ ವತಿಯಿಂದ ಕಲ್ಲಡ್ಕ ಆಸುಪಾಸಿನ ಪ್ರದೇಶಗಳ ಯುವಕರ "ಸ್ನೇಹ ಸಮ್ಮಿಲನ 2024"ರ ಸಂಭ್ರಮವು ಮಂಗಳೂರು ಹೊರವಲಯದ ಇನೋಳಿಯ ಲಾಲ್ ಪತ್ತರ್ ರೆಸಾರ್ಟ್ ನಲ್ಲಿ ನಡೆಯಿತು.

ಸ್ನೇಹ ಸಮ್ಮಿಲನ ಒಕ್ಕೂಟದ ಸಂಚಾಲಕ ಇಮ್ತಿಯಾಝ್ ಗೋಳ್ತಮಜಲು ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಆಟೋಟ ಸ್ಪರ್ಧೆಗಳು, ಸಾಂಸ್ಕೃತಿಕ, ಮನೋರಂಜನಾ ಕಾರ್ಯಕ್ರಮಗಳು ನಡೆಯಿತು.

ಎಂ.ಫ್ರೆಂಡ್ಸ್ ಟ್ರಸ್ಟ್ ಅಧ್ಯಕ್ಷ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಲಾಲ್ ಪತ್ತರ್ ರೆಸಾರ್ಟ್ ಮಾಲೀಕರಾದ ಸಫ್ವಾನ್, ಸಲ್ಮಾನ್, ಹಜಾಜ್ ಸಮೂಹ ಸಂಸ್ಥೆಗಳ ಪಾಲುದಾರರಾದ ಮುಹಮ್ಮದ್ ಮುಸ್ತಫಾ, ಶರೀಫ್ ಹಾಜಿ ಗೋಳ್ತಮಜಲು, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಹಮೀದ್ ಗೋಳ್ತಮಜಲು, ಹಂಝ ಪೆರ್ನೆ, ರಫೀಕ್ ಕಲ್ಲಡ್ಕ, ಖಾದರ್ ಕೆ.ಸಿ.ರೋಡ್, ನ್ಯಾಯವಾದಿಗಳಾದ ಆಸಿಫ್ ಅಮರ್, ಹಬೀಬುರ್ರಹ್ಮಾನ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

ಪತ್ರಕರ್ತ ಲತೀಫ್ ನೇರಳಕಟ್ಟೆ, ಗೋಳ್ತಮಜಲು ಗ್ರಾಮ ಪಂಚಾಯತ್ ಸದಸ್ಯ ಹಾರಿಸ್ ಅಮರ್, ಸಿದ್ದೀಕ್ ಮದಕ, ಜಿ.ಎಸ್.ಸಿದ್ದೀಕ್, ಮರ್ಶದ್ ಕಲ್ಲಡ್ಕ, ತ್ವಾಹಿರ್ ಕರ್ನಾಟಕ, ಫಾರೂಕ್ ಕೆ.ಎಚ್ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು.

ಕಾರ್ಯಕ್ರಮ ಸಂಯೋಜಕರಾದ ಉಬೈದುಲ್ಲಾ ಮುರಬೈಲು, ಇರ್ಶಾದ್ ಮದಕ, ಇಬ್ರಾಹಿಂ ಕೆ.ಸಿ.ರೋಡ್ ಪ್ರಮುಖರಾದ ಕೆ.ಕೆ.ಹಾರಿಸ್, ಮನ್ಸೂರ್ ಸೂರಜ್, ಸಮೀರ್ ಮೊಬೈಲ್, ಡಾ.ಜಮಾಲ್, ಶರೀಫ್ ಎಸ್.ಆರ್, ಆಸಿಫ್ ಸೀಕೋ, ಮನ್ಸೂರ್ ಇಸ್ಮಾಯಿಲ್ ನಗರ, ಖಲೀಲ್ ಬಳ್ಳೆಕೋಡಿ, ಫಯಾಲ್, ಖಲೀಲ್ ಎಸಿ, ರಝಾಕ್, ಸತ್ತಾರ್, ಸವೂದ್, ಝಮೀರ್ ಝೂಮ್, ತೌಫೀಕ್ ಝಮಾನ್ ಮೊದಲಾದವರು ಉಪಸ್ಥಿತರಿದ್ದರು.

ಅಹ್ರಾಸ್ ಗೋಳ್ತಮಜಲು, ಶಿಹಾಬ್ ಗೋಳ್ತಮಜಲು, ಝಮಾನ್ ಬಾಯ್ಸ್ ಕಲ್ಲಡ್ಕ ಹಾಗೂ ಶೇರಿಂಗ್ ಹೆಪ್ಪಿನೆಸ್ ತಂಡದವರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಹಾರಿಸ್, ಶಾಹಿದ್, ಜುನೈದ್, ರಹಿಮಾನ್ ಮತ್ತು ಬಿಲಾಲ್ ಇವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ಕೆ.ಕೆ.ಸಹೀದ್ ಸ್ವಾಗತಿಸಿ, ಇರ್ಫಾನ್ ವಂದಿಸಿದರು. ಸಂಶುದ್ದೀನ್ ಕೆ.ಸಿ.ರೋಡ್ ಕಾರ್ಯಕ್ರಮ ನಿರೂಪಿಸಿದರು.













 


 


 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News