ಯೆನೆಪೋಯ ವಿವಿ: ಅಂತಾರಾಷ್ಟ್ರೀಯ ಸಮ್ಮೇಳನ "ಐಕಾನ್ ಯೂತ್ 2025" ಉದ್ಘಾಟನಾ ಸಮಾರಂಭ
ಮಂಗಳೂರು: ದೇರಳಕಟ್ಟೆಯ ಯೆನೆಪೋಯ ಪರಿಗಣಿತ ವಿಶ್ವ ವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ "ಐಕಾನ್ ಯೂತ್ 2025" ಉದ್ಘಾಟನಾ ಸಮಾರಂಭವು ಮೇ 15ರಂದು ನಡೆಯಿತು.
ಭವಿಷ್ಯದಲ್ಲಿ ಬದಲಾವಣೆ ಹರಿಕಾರರಾಗಿ ಕಾರ್ಯನಿರ್ವಹಿಸಲು ಯುವಕರನ್ನು ಪ್ರೋತ್ಸಾಹಿಸುವ ಮಹತ್ವದ ಸಮ್ಮೇಳನ ಇದಾಗಿದೆ. ಈ ಸಾಧನೆಗಾಗಿ ಯೆನೆಪೋಯ ಪರಿಗಣಿತ ವಿಶ್ವ ವಿದ್ಯಾಲಯವನ್ನು ಶ್ಲಾಘಿಸಬೇಕು ಎಂದು ಅಂತಾರಾಷ್ಟ್ರೀಯ ಸಮ್ಮೇಳನ "ಐಕಾನ್ ಯೂತ್ 2025" ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಶ್ರೀಮತಿ ಸಾರಾ ಜಯಲ್ ಸಾಲ್ಮಿ,ನಿರ್ದೇಶಕರು, (ಆಡಳಿತ, ಐಸಿ, ಇ-ಜನರಲ್, ಸಿಆರ್, ಆರ್ಜಿಎನ್ಐವೈಡಿ, ಎನ್ವೈಕೆಎಸ್) ಇವರು ನುಡಿದರು.
ಯುವಜನ ಮತ್ತು ಕ್ರೀಡಾ ಸಚಿವಾಲಯ ಭಾರತ ಸರ್ಕಾರ ಹಾಗೂ ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ಇದರ ಸಹಯೋಗದಲ್ಲಿ ಮೇ 15 ರಂದು ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ಐಕಾನ್ ಯೂತ್ 2025 ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ಮನ್ಸುಖ್ ಮಾಂಡವೀಯ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ನಿತೇಶ್ ಕುಮಾರ್ ಮಿಶ್ರ ಕಾರ್ಯದರ್ಶಿ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಹಾಗೂ ನಿತೇಶ್ ಕುಮಾರ್ ಮಿಶ್ರ, ಜಂಟಿ ಕಾರ್ಯದರ್ಶಿ,ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಶುಭ ಹಾರೈಸಿದರು.
ಉಪ ಕುಲಪತಿ ಡಾ. ಎಂ. ವಿಜಯಕುಮಾರ್ ಅವರು ದೀಕ್ಸುಚಿ ಭಾಷಣ ಮಾಡುತ್ತಾ ಭಾರತದ ಭವಿಷ್ಯಕ್ಕೆ ಕೊಡುಗೆ ನೀಡಿ, ಗಡಿಗಳನ್ನು ಮೀರಿ ಬೆಳೆಯಬೇಕು ಮತ್ತು ಚರ್ಚೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳ ಬೇಕೆಂದು ಪ್ರೋತ್ಸಾಹಿಸಿದರು.
ಕುಲಪತಿ ಡಾ. ಯೆನೇಪೋಯ ಅಬ್ದುಲ್ಲಾ ಕುಂಞಿ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಭಾಗವಹಿಸುವ ಯುವ ಪೀಳಿಗೆ ಜ್ಞಾನ ಸಂಪಾದನೆ ಮತ್ತು ತಮ್ಮ ವ್ಯಕ್ತಿತ್ವವನ್ನು ಅಭಿವೃದ್ಧಿ ಪಡಿಸಿ ಭವಿಷ್ಯದ ನಾಯಕ ರಾಗಲು ಅವಕಾಶವನ್ನು ಪಡೆಯಬೇಕೆಂದು ಕರೆ ನೀಡಿದರು.
ಕಾರ್ತಿಗೇಯನ್, ಪ್ರಾದೇಶಿಕ ನಿರ್ದೇಶಕರು, ಎನ್ಎಸ್ಎಸ್ ಮತ್ತು ಡಾ. ಪ್ರತಾಪ್ ಲಿಂಗಯ್ಯ, ರಾಜ್ಯ ಎನ್ಎಸ್ಎಸ್ ಅಧಿಕಾರಿ ಉಪಸ್ಥಿತರಿದ್ದರು.
ಕುಲಸಚಿವರಾದ ಡಾ. ಗಂಗಾಧರ ಸೋಮಯಾಜಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಸಮ್ಮೇಳನದ ಸಂಘಟನೆಯ ಕಾರ್ಯದರ್ಶಿ ಡಾ. ಅಶ್ವಿನಿ ಡಿ. ಶೆಟ್ಟಿ ಅವರು ವಂದನಾರ್ಪಣೆ ಮಾಡಿದರು. ಶಿಫಾಲಿ ಮತ್ತು ಪ್ರಿಯಾ ಮಿನೇಜಸ್ ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಸಮ್ಮೇಳನದಲ್ಲಿ ಭಾರತ ಮತ್ತು 5 ದೇಶಗಳ 650ಕ್ಕೂ ಹೆಚ್ಚು ಯುವ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ ಎಂದು ಸಂಘಟನಾ ಕಾರ್ಯದರ್ಶಿ ಡಾ ಅಶ್ವಿನಿ ಡಿ ಶೆಟ್ಟಿ ಅವರು ತಿಳಿಸಿದ್ದಾರೆ.