ಗ್ರೀನ್ ವ್ಯೂ ವಿದ್ಯಾಸಂಸ್ಥೆಯಲ್ಲಿ ’ಮೆಗಾ ಟಿಂಕರಿಂಗ್ ಡೇ-2025’ ಕಾರ್ಯಕ್ರಮ
Update: 2025-08-13 18:09 IST
ಕೊಣಾಜೆ, ಆ.13: ಅಟಲ್ ಇನ್ನೋವೇಶನ್ ಮಿಶನ್ ನವರು ನಡೆಸುವ ಱಮೆಗಾ ಟಿಟಕರಿಂಗ್ ಡೇ-2025ನಲ್ಲಿ ಗ್ರೀನ್ ವ್ಯೂ ಪ್ರೌಢ ಶಾಲೆಯ 40 ವಿದ್ಯಾರ್ಥಿಗಳು ಭಾಗವಹಿಸಿದರು.
ಮುಖ್ಯ ಶಿಕ್ಷಕಿ ನಮಿತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾರ್ಗದರ್ಶಕರಾಗಿ ಭಾಗವಹಿಸಿದ್ದ ಲರ್ನಿಂಗ್ ಲಿಂಕ್ ಫೌಂಡೇಶನ್‌ನ ರೀಜನಲ್ ಮ್ಯಾನೇಜರ್ ಮುಹಮ್ಮದ್ ಶಾಕಿರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಟಲ್ ನೋಡಲ್ ಶಿಕ್ಷಕ ಇಬ್ರಾಹಿಂ ಖಲೀಲ್ ಬಿ. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಹ ಶಿಕ್ಷಕಿಯಾದ ರಶ್ಮಿ ಎಸ್. ಸ್ವಾಗತಿಸಿದರು. ಫಾತಿಮಾ ಶೈಮಾ ಕಾರ್ಯಕ್ರಮ ನಿರೂಪಿಸಿದರು.