ನಿವೇಶನ ನೀಡುವುದಾಗಿ ನಂಬಿಸಿ 40 ಲಕ್ಷ ರೂ. ವಂಚನೆ; ಪ್ರಕರಣ ದಾಖಲು
Update: 2023-12-19 20:42 IST
ಮಂಗಳೂರು, ಡಿ.19: ಬೆಂಗಳೂರಿನ ಫ್ರೇಜರ್‌ಟೌನ್ ವ್ಯಾಪ್ತಿಯಲ್ಲಿ ನಿವೇಶನ ನೀಡುವುದಾಗಿ ನಂಬಿಸಿ 40 ಲಕ್ಷ ರೂ. ವಂಚಿಸಿದ ಬಗ್ಗೆ ಆರೋಪಿ ಸೆಲ್ವಕುಮಾರ್ ವಿರುದ್ಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಘಟನೆ ವರದಿಯಾಗಿದೆ.
ಆರೋಪಿ ಸೆಲ್ವಕುಮಾರ್ ಬೆಂಗಳೂರಿನ ಎ.ಕೆ. ಕಾಲನಿ ಬಿಎಸ್‌ಎ ರೋಡ್ ಕ್ರಾಸ್, ಫ್ರೇಜರ್ ಟೌನ್‌ನಲ್ಲಿ 2 ಎಕರೆ 20ಗುಂಟೆ ಸ್ಥಿರಾಸ್ತಿಯನ್ನು ಕೊಡಿಸುವುದಾಗಿ ಹೇಳಿ ದೂರುದಾರರನ್ನು ನಂಬಿಸಿದರು ಎನ್ನಲಾಗಿದೆ. ಬಳಿಕ ಅ.23ರಂದು ಸ್ಥಿರಾಸ್ತಿ ಖರೀದಿಸುವ ಬಗ್ಗೆ 20 ಲಕ್ಷ ರೂ. ಮೌಲ್ಯದ ಚೆಕ್ ಹಾಗೂ ನಗದು 20ಲಕ್ಷ ರೂ. ಸೇರಿದಂತೆ ಒಟ್ಟು 40 ಲಕ್ಷ ರೂ. ಹಣವನ್ನು ಮುಂಗಡವಾಗಿ ಆರೋಪಿಗೆ ನೀಡಿದ್ದಾರೆ.
ನಂತರ ಆರೋಪಿಯು ಸ್ಥಿರಾಸ್ತಿಯನ್ನು ದೂರುದಾರರಿಗೆ ಕೊಡಿಸದೇ ಹಣವನ್ನು ವಾಪಾಸು ನೀಡದೇ ವಂಚನೆ ಮಾಡಿರುವು ದಾಗಿ ಆರೋಪಿಸಲಾಗಿದೆ. ಆರೋಪಿ ನೀಡಿದ ಚೆಕ್ ಕೂಡಾ ಅಮಾನ್ಯಗೊಂಡಿರುತ್ತದೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.