×
Ad

ಇನ್ಸಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಅಲೈಡ್ ಆರ್ಟ್ಸ್‌: ಕರಾಟೆಯಲ್ಲಿ 5 ಚಿನ್ನ, 8 ಬೆಳ್ಳಿ, 27 ಕಂಚಿನ ಪದಕ

Update: 2024-01-12 19:38 IST

ಉಪ್ಪಿನಂಗಡಿ: ಇನ್ಸಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಅಲೈಡ್ ಆರ್ಟ್ಸ್‌ ಉಪ್ಪಿನಂಗಡಿ ಶಾಖೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ 5 ಚಿನ್ನ, 8 ಬೆಳ್ಳಿ ಹಾಗೂ 27 ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ.

ಇಲ್ಲಿನ ವಿದ್ಯಾರ್ಥಿಗಳಾದ ವಿಶ್ವಜಿತ್ ಎಂ., ವಂಶ್ ವೈ ಶೆಟ್ಟಿ, ಪ್ರಣವ್ ಎಸ್. ಕಾಳೆ, ಮಂಜುನಾಥ್, ಹೃತಿಕ್ ರೈ, ಶರೂನ್ ಪಿ. ಎಸ್., ಶಮಿಕಾ, ಚಾರ್ವಿ, ಚಂದಾಸ್, ಶ್ರವಣ್, ವರ್ಣಿತ್ ಕುಮಾರ್, ಹೇಮಂತ್, ಶವಂತ್ ನಾಯಕ್, ಪ್ರಭವ್, ಯಶೀಲ್, ನಿನಾದ್, ದುರ್ಗಾಪ್ರಸಾದ್, ದಕ್ಷ್ ಎಂ.ಆರ್., ಯಶಸ್ ಎಂ. ಹಾಗೂ ಮಾನ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಇವರೆಲ್ಲಾ ಉಪ್ಪಿನಂಗಡಿಯ ಇಂದ್ರಪ್ರಸ್ಥ ಮತ್ತು ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾಗಿದ್ದು, ಕರಾಟೆಯಲ್ಲಿ ಪದಕ ವಿಜೇತರಾಗಿದ್ದಾರೆ.

ಇವರು ಇನ್ಸಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಅಲೈಡ್ ಆರ್ಟ್ಸ್‌ ನಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದಾರೆ. ಇವರಿಗೆ ಸಂಸ್ಥೆಯ ಮುಖ್ಯ ಶಿಕ್ಷಕ ಉಮೇಶ್ ಆಚಾರ್ಯ ಹಾಗೂ ಸಹ ಶಿಕ್ಷಕ ನವೀನ್ ಕುಮಾರ್ ತರಬೇತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News