×
Ad

ಮಹಿಳೆಗೆ 56.40 ಲಕ್ಷ ರೂ. ವಂಚನೆ: ಪ್ರಕರಣ ದಾಖಲು

Update: 2025-04-16 21:06 IST

ಕಾಪು, ಎ.16: ನೆರೆಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದ ವ್ಯಕ್ತಿಯೋರ್ವ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಳೂರು ನಿವಾಸಿ ರೇವತಿ(72) ಎಂಬವರ ಮನೆ ಸಮೀಪ ಎರಡು ವರ್ಷಗಳ ಹಿಂದೆ ಬಾನುಚಂದ್ರ ಪೆದ್ದಪಲ್ಲಿ, ಆತನ ತಂದೆ, ತಾಯಿ, ಹೆಂಡತಿ ಮತ್ತು ಇಬ್ಬರು ಹೆಣ್ಣು ಮಕ್ಕಳು ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿ ದ್ದರು. ಇವರು ರೇವತಿ ಅವರಲ್ಲಿ ಹಣದ ಅವಶ್ಯಕತೆ ಇದೆ ಎಂದು ನಟಿಸಿ ತನಗೆ ಬ್ಯಾಂಕ್ ಖಾತೆ ಕೂಡಾ ಇಲ್ಲ ಎಂದು ಹೇಳಿದ್ದನು.

ಆದ್ದರಿಂದ ತನ್ನ ವ್ಯವಹಾರಗಳಿಗೆ ಬ್ಯಾಂಕ್ ಖಾತೆಯನ್ನು ಬಳಸಲು ಅವಕಾಶ ನೀಡುವಂತೆ ರೇವತಿ ಅವರಲ್ಲಿ ವಿನಂತಿಸಿದ್ದನು. ಅದರಂತೆ ಆತ ರೇವತಿ ಬ್ಯಾಂಕ್ ಖಾತೆ ಬಳಸುತ್ತಿದ್ದನು. ಬಾನುಚಂದ್ರ ಪಡಪಲ್ಲಿ, ಆತನ ಹೆಂಡತಿಯೊಂದಿಗೆ ಸೇರಿ ರೇವತಿ ಅವರಿಗೆ ಒಟ್ಟು 56,40,392 ರೂ. ವಂಚಿಸಿರುವುದಾಗಿ ದೂರ ಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News