×
Ad

ನಿಟ್ಟೆ ಪರಿಗಣಿತ ವಿ.ವಿ.ಯಲ್ಲಿ 6 ದಿನಗಳ ತರಬೇತಿಗೆ ಚಾಲನೆ

Update: 2024-02-19 18:08 IST

ಕೊಣಾಜೆ: ಅಂತರಾಷ್ಟ್ರೀಯ ಮಟ್ಟದಲ್ಲಿ ಪರಸ್ಪರ ಜ್ಞಾನ ವಿನಿಮಯ ಹಾಗೂ ಕೌಶಲ್ಯಗಳನ್ನು ಅರಿಯಲು ಕೋರ್ಸ್‌ ಸಹ ಕಾರಿ. ಎರಡನೇ ವರ್ಷ ನಿಟ್ಟೆ ವಿ.ವಿಯಲ್ಲಿ ನಡೆಸುತ್ತಿರುವ ಕೋರ್ಸಿಗೆ ಆಡಳಿತ ಸಂಸ್ಥೆಯ ಉತ್ತಮವಾದ ಸಹಕಾರದಿಂದ ಸಾಧ್ಯವಾಗಿದೆ. ಸರ್ಜನ್‌ ಗಳು ಕೋರ್ಸಿನ ಸದುಪಯೋಗವನ್ನು ಪಡೆಯಬಹುದು ಎಂದು ಇಂಗ್ಲೆಂಡ್‌ ನ ಆರ್ ಸಿಎಸ್ ನಿರ್ದೇಶಕ ಡಾ. ಇಯಾನ್‌ ಮಹೇಶನ್‌ ಅಭಿಪ್ರಾಯಪಟ್ಟರು.

ದೇರಳಕಟ್ಟೆಯ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಕೆ.ಎಸ್‌ ಹೆಗ್ಡೆ ವೈದ್ಯಕೀಯ ಅಕಾಡೆಮಿಯ ಬೆಳ್ಳಿ ಹಬ್ಬದ ಪ್ರಯುಕ್ತ ಇಂಗ್ಲೆಂಡ್‌ ನ ರಾಯಲ್‌ ಕಾಲೇಜ್‌ ಆಫ್‌ ಸರ್ಜನ್ಸ್‌ ಆಶ್ರಯದಲ್ಲಿ (CCrISP course) ತೀವ್ರನಿಗಾದಲ್ಲಿರುವ ಶಸ್ತ್ರಚಿಕಿತ್ಸಾ ರೋಗಿಯ ಆರೈಕೆ ಕುರಿತು ಕೆ.ಎಸ್‌ ಹೆಗ್ಡೆ ಆಸ್ಪತ್ರೆಯ ಚಿಂತನ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾದ ಆರು ದಿನಗಳ ತರಬೇತಿ ಕಾರ್ಯಗಾರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ಪರಿಗಣಿತ ವಿ.ವಿಯ ಕುಲಾಧಿಪತಿ ಎನ್‌ ವಿನಯ್‌ ಹೆಗ್ಡೆ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿಟ್ಟೆ ವಿ.ವಿ.ಯ ಉಪಕುಲಾಧಿಪತಿ ಎನ್.‌ ಶಾಂತರಾಮ ಶೆಟ್ಟಿ ಮಾತನಾಡಿ, ಬೆಳಗುವ ದೀಪವು ಜೀವನಶೈಲಿಯನ್ನು ಬೆಳಗಿಸುತ್ತದೆ. ಇಂಗ್ಲೆಂಡಿನ ರಾಯಲ್‌ ಕಾಲೇಜಿನ ಸರ್ಜನ್‌ಗಳು ನೀಡುತ್ತಿರುವ ಕೋರ್ಸ್ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯಕ್ಕೆ ಹೆಮ್ಮೆಯ ವಿಚಾರವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಅಂತರಾಷ್ಟ್ರೀಯ ರೋಗಿಗಳ ಸುರಕ್ಷತೆಗೆ ಆರು ಗುರಿಗಳನ್ನು ಮುಂದಿರಿಸಿದ್ದರೂ, ಅಮೆರಿಕಾದಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರದಲ್ಲೇ ವಾರ್ಷಿಕ 2,14,000 ರೋಗಪತ್ತೆ ಹಚ್ಚೆಹಚ್ಚುವಿಕೆ ಸಾಧ್ಯವಾಗದೆ ಸಾವನ್ನಪ್ಪುತ್ತಿದ್ದಾರೆ . ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ದೊರಕಿಸುವ ಗುರಿಯನ್ನು ಕೋರ್ಸ್‌ ಹೊಂದಿದೆ. ಹಾಸಿಗೆಯಿಂದ ಮರುಜೀವನ ಕೊಡುವಂತಹ ಕಾರ್ಯಕ್ಕೆ ವೈದ್ಯಕೀಯ ಲೋಕ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯಚರಿಸಬೇಕಿದೆ ಎಂದರು.

ಈ ಸಂದರ್ಭ ಕುಲಸಚಿವ ಡಾ. ಎಂ.ಎಸ್‌ ಮೂಡಿತ್ತಾಯ, ಕ್ಷೇಮ ಡೀನ್‌ ಡಾ. ಪಿ ಎಸ್‌ ಪ್ರಕಾಶ್‌ ಉಪಸ್ಥಿತರಿದ್ದರು. ಕೋರ್ಸ್‌ ಸಂಘಟಕ ಡಾ. ಜಯಕೃಷ್ಣನ್‌ ಸ್ವಾಗತಿಸಿದರು. ಕ್ಷೇಮ ಜನರಲ್‌ ಸರ್ಜರಿ ವಿಭಾಗ ಮುಖ್ಯಸ್ಥ ಡಾ. ಕೆ.ಆರ್‌ ಭಗವಾನ್‌ ವಂದಿಸಿದರು. ಡಾ.ಐಶ್ವರ್ಯ ಮತ್ತು ಮೀರಾ ವಂದಿಸಿದರು.








 


 


 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News