×
Ad

ಫೆ. 7ರಿಂದ ಅಡ್ಕಸ್ಥಳ ಮಖಾಂ ಉರೂಸ್

Update: 2024-02-06 18:38 IST

ಮಂಗಳೂರು: ಕರ್ನಾಟಕ-ಕೇರಳ ಗಡಿ ಪ್ರದೇಶದ ಅಡ್ಕಸ್ಥಳದಲ್ಲಿರುವ ಇತಿಹಾಸ ಪ್ರಸಿದ್ಧ ಬಹುಮಾನ್ಯ ಮಶ್ಹೂರ್ ವಲಿಯುಲ್ಲಾಹಿ (ರ.ಅ) ಅವರ ದರ್ಗಾ ಶರೀಫ್‌ನಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಸಿಕೊಂಡು ಬರುತ್ತಿರುವ ಉರೂಸ್ 2024 ಫೆಬ್ರವರಿ 7ರಿಂದ 10ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅಡ್ಕಸ್ಥಳ ಮಶ್ಹೂರ್ ನಗರದಲ್ಲಿ ನಡೆಯಲಿದೆ.

ಫೆ.7ರಂದು ಬೆಳಗ್ಗೆ 9:00 ಗಂಟೆಗೆ ಅಡ್ಕಸ್ಥಳ ಬದ್ರಿಯಾ ಜುಮಾ ಮಸ್ಜಿದ್ ಜಮಾಅತ್ ಕಮಿಟಿಯ ಅಧ್ಯಕ್ಷ ಸಿ.ಎ.ಅಬ್ದುಲ್ಲ ಮಾದುಮೂಲೆ ಧ್ವಜಾರೋಹಣ ನೆರವೇರಿಸಲಿರುವರು.

ರಾತ್ರಿ 7:00ಕ್ಕೆ ಉರೂಸ್ ಅಂಗವಾಗಿ ಧಾರ್ಮಿಕ ಪ್ರವಚನ ಹಾಗೂ ಇತರ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು.

ಸೆಯ್ಶದ್ ಮುಖ್ತಾರ್ ತಂಳ್ ಕುಂಬೋಳ್ ಉದ್ಘಾಟನೆ ನೆರವೇರಿಸಲಿರುವರು. ಅಡ್ಕಸ್ಥಳ ಮುದರ್ರಿಸ್ ಅಬ್ದುಲ್ ನಾಸಿರ್ ಫೈಝಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅಬ್ದುಲ್ ಗಫೂರ್ ಮೌಲವಿ ಕಿಚೇರಿ ಮುಖ್ಯ ಪ್ರವಚನ ನೀಡಲಿದ್ದಾರೆ.

ಮುಖ್ಯ ಅತಿಥಿಯಾಗಿ ಮರ್ತ್ಯ ಮುದರ್ರಿಸ್ ರಫೀಕ್ ಸಅದಿ ದೇಲಂಪಾಡಿ ಭಾಗವಹಿಸಲಿದ್ದಾರೆ. ಫೆ.8ರಂದು ರಾತ್ರಿ7 ಗಂಟೆಗೆ ಮದನಿಯಂ ಸ್ವಲಾತ್ ಮಜ್ಲಿಸ್ ಆಯೋಜಿಸಲಾಗಿದೆ. ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ಇದರ ನೇತೃತ್ವ ವಹಿಸಲಿದ್ದಾರೆ.

ಸೈಯ್ಯದ್ ಇಂಬಿಚ್ಚಿಕೋಯ ಜಮಲುಲ್ಲೈಲಿ ತಂಳ್ ಕಾಟುಕುಕ್ಕೆ ದುಆ ಹಾಗೂ ಆಶೀರ್ವಚನ ನೀಡಲಿದ್ದಾರೆ. ಅಡ್ಯನಡ್ಕ ಮಸೀದಿಯ ಖತೀಬ್ ಹಾರೀಸ್ ರಹ್ಮಾನಿ ಕೋಲ್ಪೆ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಫೆ.9 ರಾತ್ರಿ 7:00ಕ್ಕೆ ಆಶಿಕ್ ದಾರಿಮಿ ಆಲಪ್ಪುಝ ಮುಖ್ಯ ಪ್ರವಚನ ನೀಡಲಿದ್ದಾರೆ.

ಮುಖ್ಯ ಅತಿಥಿಯಾಗಿ ಪೆರ್ಲ ಟೌನ್ ಜುಮಾ ಮಸ್ಜಿದ್‌ನ ಖತೀಬ್ ಅಬ್ದುಲ್ ಖಾದರ್ ಖಾಸಿಮಿ ಭಾಗವಹಿಸಲಿದ್ದಾರೆ.

ಸಮಾರೋಪ ಸಮಾರಂಭ: ಫೆ.10ರಂದು ರಾತ್ರಿ, 7:00ಕ್ಕೆ ಉರೂಸ್ ನ ಸಮಾರೋಪ ಸಮಾರಂಭ ನಡೆಯಲಿದೆ. ಶೈಖುನಾ ಸೈಯ್ಯದ್ ಜಿಫ್ರಿ ಮುತ್ತು ಕೋಯ ತಂಳ್ ಆಶೀರ್ವಚನ ನೀಡಲಿದ್ದಾರೆ. ಜಮಾಅತ್ ಕಮಿಟಿಯ ಅಧ್ಯಕ್ಷ ಸಿಎ ಅಬ್ದುಲ್ಲ ಮಾದುಮೂಲೆ ಆಶಯ ಭಾಷಣ ಮತ್ತು ಗೌರವಾಧ್ಯಕ್ಷ ಸೆಯ್ಶದ್ ಮೀರ್ ಝಾಹಿದ್ ಅಲ್ ತಂಳ್ ಅಲ್ ಬುಖಾರಿ ಮಂಜೇಶ್ವರ ಉದ್ಘಾಟನೆ ನೆರವೇರಿಸುವರು. ಮುಸ್ತಫ ನಈಮಿ ಹಿಮಮಿ ಹಾವೇರಿ ಮುಖ್ಯ ಪ್ರವಚನ ನೀಡುವರು.

ಮುಖ್ಯ ಅತಿಥಿಗಳಾಗಿ ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್, ಕಳಿಯಾರ್ ಜೆಎಚ್‌ಕ್ಯು ಕಾಲೇಜಿನ ಪ್ರಿನ್ಸಿಪಾಲ್ ಅಲ್ ಹಾಜ್ ಕೆ.ಬಿ.ಅಬ್ದುರ‌್ರಝಾಕ್ ಮಿಸ್ಬಾಹಿ , ದೇಲಂಪಾಡಿ ಚಮ್ಮತಡ್ಕ ಖತೀಬ್ ಪಿ.ಐ.ಇಸ್ಮಾಯೀಲ್ ದಾರಿಮಿ ಇರ್ದೆ , ಶೇಖಮಲೆ ಖತೀಬ್ ಅಬ್ದುಲ್ ಹಮೀದ್ ಲತೀಫಿ ಸೇರಾಜೆ, ಮರಕ್ಕಿಣಿ ಖತೀಬ್ ಉಸ್ಮಾನ್ ದಾರಿಮಿ, ಕಾಟುಕುಕ್ಕೆ ಖತೀಬ್ ಹಂಸ ಮುಸ್ಲಿಯಾರ್ ಭಾಗವಹಿಸಲಿರುವರು. ಅಡ್ಕಸ್ಥಳ ಮುದರ್ರಿಸ್ ಅಬ್ದುಲ್ ನಾಸಿರ್ ಫೈಝಿ ಅಧ್ಯಕ್ಷತೆ ವಹಿಸುವರು.

ಉರೂಸ್‌ನ ಸಮಾರೋಪ ಸಮಾರಂಭದ ಬಳಿಕ ಅನ್ನದಾನ ನಡೆಯಲಿದೆ ಎಂದು ಜಮಾಅತ್ ಕಮಿಟಿಯ ಅಧ್ಯಕ್ಷ ಸಿ.ಎ.ಅಬ್ದುಲ್ಲಾ ಮಾದುಮೂಲೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News