ಮಂಗಳೂರು: ಅ.9 ,10: ಅಂತರ್‌ರಾಷ್ಟ್ರೀಯ ಹ್ಯಾಕಥಾನ್
ಮಂಗಳೂರು, ಅ.7: ಶ್ರೀನಿವಾಸ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ಅಂತರ್‌ರಾಷ್ಟ್ರೀಯ ಹ್ಯಾಕಥಾನ್ ‘ಶ್ರೀನಥಾನ್’ನ್ನು ಅ.9 ಮತ್ತು 10ರಂದು ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಶ್ರೀನಿವಾಸ ಮಯ್ಯ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಂಜಿನಿಯರಿಂಗ್ ಕ್ಷೇತ್ರದ ಪ್ರತಿಭಾನ್ವಿತರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಈ ಹ್ಯಾಕಥಾನ್‌ಗೆ ಈಗಾಗಲೇ ವಿದೇಶಿ ತಂಡಗಳೂ ಸೇರಿ 114 ತಂಡಗಳು ಹೆಸರು ನೋಂದಾಯಿಸಿವೆ ಎಂದರು.
ಲೈವ್ ಪ್ರಾಬ್ಲಮ್ ಸ್ಟೇಟ್‌ಮೆಂಟ್‌ಗಳನ್ನು ನೀಡಲು ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗುತ್ತದೆ. ಇವುಗಳ ಮೇಲೆ 24 ಗಂಟೆಗಳ ಕಾಲ ನಿರಂತರವಾಗಿ ಕಾರ್ಯ ನಿರ್ವಹಣೆಯಾಗುತ್ತದೆ’ ಎಂದರು.
ಅ.9ರಂದು ಬೆಳಿಗ್ಗೆ 10.30ಕ್ಕೆ ಉದ್ಘಾಟನೆ ನಡೆಯಲಿದೆ. ವಿಜೇತ ತಂಡಗಳಿಗೆ ಇಂಟರ್ನ್‌ಶಿಪ್ ಅವಕಾಶ ನೀಡಲು ಪ್ರೋತ್ಸಾಹಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಯೋಜಕ ಶೈಲೇಶ್ ಶೆಟ್ಟಿ, ನೇಮಕಾತಿ ಅಧಿಕಾರಿ ಧೀರಜ್ ಹೆಬ್ರಿ, ಕೀರ್ತಿ, ಮನೀಷ್ ಶೆಟ್ಟಿ ಉಪಸ್ಥಿತರಿದ್ದರು.