ಬಂಟ್ವಾಳ: ತೌಹೀದ್ ಪ್ರೌಢಶಾಲೆಗೆ ಶೇ. 97.32 ಫಲಿತಾಂಶ
Update: 2025-05-03 22:19 IST
ಬಂಟ್ವಾಳ ; ಇಲ್ಲಿನ ಕೆಳಗಿನಪೇಟೆಯ ತೌಹೀದ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಬಂಟ್ವಾಳ 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇಕಡ 97.32 ಫಲಿತಾಂಶ ಪಡೆದಿದೆ.
44 ಹುಡುಗರು ಹಾಗೂ 68 ಹುಡುಗಿಯರು ಸೇರಿದಂತೆ ಒಟ್ಟು 112 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾ ಗಿದ್ದು 109 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 97.32 ಫಲಿತಾಂಶವನ್ನು ಪಡೆದಿದ್ದಾರೆ. ಈ ಪೈಕಿ 28 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 69 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದಾರೆ.
ಫಾತಿಮಾ ಅಬ್ದುಲ್ ಲತೀಫ್ 600 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಹಾಗೂ ಫಾತಿಮಾ ಫಾಯಿಝ ಹಾಗೂ ಹೀನಾ ಫಾತಿಮಾ ತಲಾ 597 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಗಳಿಸಿದ್ದಾರೆ, ಆಯಿಶಾ ನಿಹಾನ 596 ಅಂಕಗಳನ್ನು ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.