ಮಂಗಳೂರು: ಜಮೀಯ್ಯತುಲ್ ಫಲಾಹ್, AIPIF, ಬ್ಲಡ್ ಡೋನರ್ಸ್ ವತಿಯಿಂದ ರಕ್ತದಾನ ಶಿಬಿರ
ಮಂಗಳೂರು : ಜಮೀಯ್ಯತುಲ್ ಫಲಾಹ್, AIPIF ಮತ್ತು ಬ್ಲಡ್ ಡೋನರ್ಸ್ ವತಿಯಿಂದ ರಕ್ತದಾನಿಗಳ ಸಹಯೋಗದಲ್ಲಿ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ರಕ್ತದಾನ ಶಿಬಿರದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಗಿದೆ. ವಿವಿಧ ಶಾಲೆಗಳಿಂದ ಭಾಗವಹಿಸಿದ್ದ ಸ್ಪರ್ಧಿಗಳಲ್ಲಿ 13 ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ನಗದು ಬಹುಮಾನ ವಿತರಿಸಲಾಗಿದೆ.
ಸಮಾರಂಭದಲ್ಲಿ ಎಂ.ಜಿ. ಹೆಗ್ಡೆ, ಪಿ.ಎ. ಫಾರ್ಮಸಿ ವಿಭಾಗದ ಪ್ರಾಧ್ಯಾಪಕರಾದ ಡಾ. ಮುಹಮ್ಮದ್ ಮುಬೀನ್, ದಕ್ಷಿಣ ಕನ್ನಡ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಡಿ.ಎಂ. ಅಸ್ಲಾಂ, ಜಮೀಯ್ಯತುಲ್ ಫಲಾಹ್ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ಶಾಹುಲ್ ಹಮೀದ್, ಇಖ್ರಾ ಅರೇಬಿಕ್ ಸ್ಕೂಲ್ ಪ್ರಾಂಶುಪಾಲರಾದ ಮೌಲಾನಾ ಸಾಲಿಂ ನದ್ವಿ, ಬ್ಲಡ್ ಡೋನರ್ಸ್ ಸ್ಥಾಪಕ ಅಧ್ಯಕ್ಷ ಮುಹಮ್ಮದ್ ಸಿದ್ದಿಕ್ ಮಂಜೇಶ್ವರ, ಇಖ್ರಾ ಸ್ಕೂಲ್ ನ ಮೌಲಾನಾ ದಾವೂದ್, ಎಐಪಿಐಎಫ್ ಸದಸ್ಯ ಮುಹಮ್ಮದ್ ಫರ್ಹಾನ್ ನದ್ವಿ ಹಾಗು ಇತರರು ಭಾಗವಹಿಸಿದ್ದರು.