×
Ad

ಪ್ರಚೋದನಕಾರಿ ಸಂದೇಶ ಆರೋಪ: Instagram ಪೇಜ್ ರದ್ದು

Update: 2025-05-12 22:13 IST

ಮಂಗಳೂರು: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದಂತೆ ಪ್ರಚೋದನಕಾರಿ ಸಂದೇಶ ಹಾಕಿ ಸಮಾಜ ಮತ್ತು ವಿವಿಧ ಧರ್ಮ ಹಾಗೂ ವರ್ಗಗಳ ಮಧ್ಯೆ ದ್ವೇಷದ ಭಾವನೆ ಸೃಷ್ಟಿಸಿದ ಆರೋಪದ ಮೇರೆಗೆ team_karna_surathkal ಎಂಬ Instagram ಪೇಜನ್ನು ರದ್ದುಗೊಳಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಸುಮಾರು 1650ರಷ್ಟು ಸಂಖ್ಯೆಯ ಪಾಲೋವಸ್ ಹೊಂದಿದ್ದ ಈ ಪೇಜ್ ವಿರುದ್ದ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂದಿನ ತನಿಖೆಗಾಗಿ ಪ್ರಕರಣವನ್ನು ಮಂಗಳೂರು ನಗರ ಸೆನ್ ಅಪರಾಧ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಈ ಪೇಜ್ ಬಗ್ಗೆ ಮಾಹಿತಿ ನೀಡುವಂತೆ Law Enforcement Agency ಪತ್ರ ಬರೆಯಲಾಗಿತ್ತು. ಅದರಂತೆ ಸಂಬಂಧಪಟ್ಟವರು ಈ Instagram ಪೇಜ್‌ನ್ನು ಕಾರ್ಯನಿರ್ವಹಿಸದಂತೆ ರದ್ದುಗೊಳಿಸಿರುತ್ತಾರೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News