×
Ad

ಸರಕಾರಿ ಶಾಲೆಗೆ MCF ಸಂಸ್ಥೆಯಿಂದ ಕಂಪ್ಯೂಟರ್ ಕೊಡುಗೆ

Update: 2024-01-19 20:18 IST

ಕಾರ್ಕಳ: ಮಂಗಳೂರು ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್ ಲಿಮಿಟೆಡ್ ಇವರು ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢ ಶಾಲೆಗೆ ನೀಡಿದ 10 ಕಂಪ್ಯೂಟರ್ ಗಳನ್ನು ಉದ್ಘಾಟಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಎಂಸಿಎಫ್ ಸಂಸ್ಥೆಯ ಮುಖ್ಯ ಉತ್ಪಾದನಾ ಅಧಿಕಾರಿ ಎಸ್ ಗಿರೀಶ್, ಮಾನವ ಸಂಪನ್ಮೂಲ ವಿಭಾಗದ ಜೆಜಿಎಂ ಚೇತನ್ ಮೆಂಡೋನ್ಸ, ವೈದ್ಯಕೀಯ ವಿಭಾಗದ ಜೆಜಿಎಂ ಡಾ.ಯೋಗೀಶ್, ಮಾರ್ಕೆಟ್ ಡೆವಲಪ್ಮೆಂಟ್ ವಿಭಾಗದ ಜೆಜಿಎಂ ಕೀರ್ತನ್ ಕುಮಾರ್ ಕೆ ಬಿ, ಶಾಲಾ ಮುಖ್ಯೋಪಾಧ್ಯಾಯರಾದ ವೇದಾವತಿ, ಪುರಸಭೆಯ ನಿಕಟ ಪೂರ್ವ ಅಧ್ಯಕ್ಷರಾದ ಸುಮಾ ಕೇಶವ್, ಪುರಸಭಾ ಸದಸ್ಯರಾದ ಪ್ರದೀಪ್ ರಾಣೆ, ಎಸ್ ಡಿ ಎಂ ಸಿ ಸದಸ್ಯರಾದ ಪ್ರಕಾಶ್ ರಾವ್, ಸಂತೋಷ್ ರಾವ್ ಹಾಗೂ ಶಾಲಾ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News