ಡಿ.10ರಿಂದ ಕೆಸಿ ರೋಡ್ ಮಸ್ಜಿದ್‌ನಲ್ಲಿ ದ್ಸಿಕ್ರ್ ಹಲ್ಕಾ ವಾರ್ಷಿಕ
Update: 2023-11-27 17:31 IST
ಕೋಟೆಕಾರ್ : ಕೆಸಿ ರೋಡ್ ಅಲ್ ಮುಬಾರಕ್ ಜುಮಾ ಮಸ್ಜಿದ್‌ನಲ್ಲಿ ನಡೆಯುವ ಮಾಸಿಕ ದ್ಸಿಕ್ರ್ ಹಲ್ಕಾ ಮಜ್ಲಿಸ್‌ನ 33ನೇ ವಾರ್ಷಿಕೋತ್ಸವವು ಡಿ.10ರಿಂದ 17ರತನಕ ಮಸೀದಿಯ ಅಧ್ಯಕ್ಷ ಎಎಂ ಅಬ್ಬಾಸ್ ಹಾಜಿ ಕೊಮರಂಗಲ ಅವರ ಅಧ್ಯಕ್ಷತೆ ಯಲ್ಲಿ ನಡೆಯಲಿದೆ.
ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುನೀರ್ ಸಖಾಫಿ ಕೆಸಿ ರೋಡ್, ಕೆಪಿ ಹುಸೈನ್ ಸಅದಿ ಕೆಸಿ ರೋಡ್, ಅಶ್ರಫ್ ರಹ್ಮಾನಿ ಚೌಕಿ, ಅಶ್ಫಾಕ್ ಫೈಝಿ ಕಾಸರಗೋಡು, ಪೆರೋಡ್ ಅಬ್ದುಲ್ ರಸ್ಮಾನ್ ಸಖಾಫಿ, ನೌಫಲ್ ಸಖಾಫಿ ಕಳಸ, ಮುಹಮ್ಮದ್ ಸಖಾಫಿ ಪಾತೂರು ಮುಖ್ಯ ಭಾಷಣ ಮಾಡಲಿದ್ದಾರೆ.
ಸಮಾರೋಪ ಕಾರ್ಯಕ್ರಮದಲ್ಲಿ ಖಾಝಿ ಫಝಲ್ ಕೋಯಮ್ಮ ತಂಙಳ ಕೂರತ್, ಕೆಪಿ ಹುಸೈನ್ ಸಅದಿ ಕೆಸಿ ರೋಡ್, ಎಮ್ಮೆಸ್ಸೆಮ್ ಅಬ್ದುರ‌್ರಶೀದ್ ಝೈನಿ ತಲಪಾಡಿ, ಇಬ್ರಾಹೀಂ ಫೈಝಿ ಉಚ್ಚಿಲ, ಮುನೀರ್ ಸಖಾಫಿ ಕೆಸಿ ರೋಡ್, ಸ್ಪೀಕರ್ ಯು.ಟಿ. ಖಾದರ್ ಮತ್ತಿತರರು ಭಾಗವಹಿಸುವರು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.