×
Ad

ಫೆ.10ರಿಂದ ಕೋಸ್ಟಲ್ ಐಟಿ ಕ್ರಿಕೆಟ್ ಚಾಂಪಿಯನ್‌ಶಿಪ್

Update: 2024-02-09 19:48 IST

ಮಂಗಳೂರು, ಫೆ.9: ನೋವಿಗೋ ಸೊಲ್ಯೂಶನ್ಸ್ ಪ್ರೈವೇಟ್ ಲಿಮಿಟೆಡ್ ಮಂಗಳೂರು ಇದರ ವತಿಯಿಂದ ಫೆ.10 ಮತ್ತು 11ರಂದು ನಗರದ ಸಹ್ಯಾದ್ರಿ ಕ್ರಿಕೆಟ್ ಮೈದಾನದಲ್ಲಿ ಕೋಸ್ಟಲ್ ಐಟಿ ಕ್ರಿಕೆಟ್ ಚಾಂಪಿಯನ್‌ಶಿಪ್(ಕೋಸ್ಟಲ್ ಐಸಿಸಿ) ಆಯೋಜಿಸಲಾಗಿದೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಿಟಿಒ ಇದರ ಸಹ ಸಂಸ್ಥಾಪಕ ಮೊಹಮ್ಮದ್ ಹನೀಫ್, ಮಂಗಳೂರಿನ ಐಟಿ ಪರಿಸರ ವ್ಯವಸ್ಥೆಗೆ ಸಹಾಯ ಮಾಡುವ ಈ ಪ್ರದೇಶದ ಐಟಿ ಕಂಪೆನಿಗಳ ನಡುವಿನ ಸಹಯೋಗವನ್ನು ಉತ್ತೇಜಿಸಲು ಈ ಕ್ರೀಡಾಕೂಟ ಆಯೋಜಿಸಲಾಗಿದೆ. ಈ ಪಂದ್ಯಾಕೂಟದಲ್ಲಿ ಒಟ್ಟು 15 ತಂಡಗಳು ಭಾಗವಹಿಸಲಿವೆ ಎಂದರು.

ಫೈನಲ್‌ನಲ್ಲಿ ಜಯಗಳಿಸುವ ತಂಡ 1 ಲಕ್ಷ ಬಹುಮಾನದೊಂದಿಗೆ ಕೋಸ್ಟಲ್ ಐಸಿಸಿ ಟ್ರೋಫಿಯನ್ನು ತನ್ನದಾಗಿಸಿ ಕೊಳ್ಳಲಿದೆ. ರನ್ನರ್ ಅಪ್ ತಂಡಕ್ಕೆ 50 ಸಾವಿರ ನಗದು ಬಹುಮಾನ ಹಾಗೂ ರನ್ನರ್ ಅಪ್ ಟ್ರೋಫಿ ನೀಡಲಾಗುವುದು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಸೀನಿಯರ್ ಮ್ಯಾನೇಜರ್ ಪವನ್ ವಿ ರೈ, ಪ್ರಮುಖರಾದ ಗೋಪಾಲಕೃಷ್ಣ ಪೈ, ಅಕ್ಷಯ್ ಶೆಣೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News