ಫೆ.11ರಂದು ಧಾರ್ಮಿಕ ಸಮ್ಮೇಳನ
Update: 2024-02-09 18:38 IST
ಉಡುಪಿ, ಫೆ.9: ಮೂಡಬಿದರೆಯ ಕನ್ನಡ ಭವನದಲ್ಲಿ ಏಕದಿನ ಧಾರ್ಮಿಕ ಸಮ್ಮೇಳನವನ್ನು ಫೆ.11ರಂದು ಬೆಳಗ್ಗೆ 9.30ಕ್ಕೆ ಆಯೋಜಿಸಲಾಗಿದೆ.
ಸಮ್ಮೇಳನದಲ್ಲಿ ಇಸ್ಲಾಮಿ ವಿದ್ವಾಂಸರಾದ ಜಾಮಿಯಾ ದಾರುಸ್ಸಲಾಮ್ ಉಮರಾಬಾದಿನ ಉಪ ಪ್ರಾಂಶುಪಾಲ ಶೇಕ್ ಹಾಫೀಝ್ ಅಬ್ದುಲ್ ಅಝೀಮ್ ಉಮರಿ ಮದನಿ, ಶೇಕ್ ಯಾಸೀರ್ ಅಲ್ ಜಾಬ್ರಿ ಮದನಿ, ಶೇಕ್ ಡಾ.ತಾರೀಕ್ ಸಫಿಉರ‌್ರಹಮಾನ್ ಮದನಿ, ಶೇಕ್ ಅಬ್ದುಲ್ ವಾರೀಸ್ ಮದನಿ, ಶೇಕ್ ಸನಾವುಲ್ಲಾ ಮದನಿ, ಶೇಕ್ ಶಬೀಬ್ ಸ್ವಲಾಹಿ ಕೇರಳ ಹಾಗೂ ಉಸ್ತಾದ್ ಶಾಕೀರ್ ಉಳ್ಳಾಲ್ ಪ್ರವಚನ ನೀಡಲಿದ್ದಾರೆಂದು ಪ್ರಕಟಣೆ ತಿಳಿಸಿದೆ.