×
Ad

ಅ.13ರಂದು ಮಂಗಳೂರಿನ ಪುರಭವನದಲ್ಲಿ ಡ್ರಗ್ಸ್ ವಿರುದ್ಧ ಜನಜಾಗೃತಿ

Update: 2023-10-11 17:45 IST

ಮಂಗಳೂರು: ಡ್ರಗ್ಸ್ ವಿರುದ್ಧ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಕರ್ನಾಟಕ ಸಲಫಿ ಅಸೋಸಿಯೇಷನ್‌ ಆಯೋಜಿಸಿರುವ ಡ್ರಗ್ಸ್ ಮುಕ್ತರಾಗೋಣ ಸೃಷ್ಟಿಕರ್ತನಿಗೆ ವಿಧೇಯರಾಗೋಣ ಎಂಬ ಧೈಯವಾಕ್ಯದಡಿಯಲ್ಲಿ ಡ್ರಗ್ಸ್ ವಿರುದ್ಧ ಅಭಿಯಾನದ ಉದ್ಘಾಟನಾ ಸಭೆಯು ಮಾಂಗಳೂರಿನ ಪುರಭವನದಲ್ಲಿ ಅಕ್ಟೋಬರ್ 13ರಂದು ಸಂಜೆ 4 ಘಂಟೆಗೆ ನಡೆಯಲಿದೆ.

ಈ ಕಾರ್ಯಕ್ರಮವನ್ನು ಡಾ. ತಾರೀಖ್ ಸಫಿಯುಗ್ರಮಾನ್ ಮುಬಾರಕಪುರಿ ಉದ್ಘಾಟಿಸಲಿದ್ದಾರೆ. ಮಂಗಳೂರು ಕೇಂದ್ರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾಗಿರುವ ಎಸ್. ಮಹೇಶ್‌ ಕುಮಾರ್ ಮುಖ್ಯ ಅತಿಥಿಯಾಗಿರುವರು. ಬಂದರು ಪೊಲೀಸ್ ಠಾಣಾ ನಿರೀಕ್ಷಕರಾದ ಅಮ್ಮತ್ ಅಲಿ, ಡಾ.ಮುಹಮ್ಮದ್ ಹಫೀಝ್ ಸ್ವಲಾಹಿ, ಮುಜಾಹಿದ್ ಬಾಲುಶೇರಿ, ಶಿಹಾಬ್ ಎಡಕ್ಕರ, ಹಾಫಿಜ್ ಶಾಕಿರ್ ಮದನಿ, ಇಜಾಝ್ ಸ್ವಲಾಹಿ, ಖಲೀಲ್ ತಲಪಾಡಿ, ಯಾಸಿರ್ ಅಲ್ ಹಿಕಮಿ ಮುಂತಾದವರು ವಿಚಾರ ಮಂಡಿಸಲಿದ್ದಾರೆ. ಮಹಿಳೆಯರಿಗೂ ಸ್ಥಳಾವಕಾಶ ಏರ್ಪಡಿಸಲಾಗಿದೆ ಎಂದು ಕರ್ನಾಟಕ ಸಲಫಿ ಅಸೋಸಿಯೇಷನ್ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News