ಸೆ.13: ಅಂತರಾಷ್ಟ್ರೀಯ ಮೀಲಾದ್ ಸಮ್ಮೇಳನ
Update: 2025-09-12 18:36 IST
ಕೋಝಿಕ್ಕೋಡ್, ಸೆ.12: ’ತಿರುವಂಸತಂ 1500’ ಎಂಬ ಘೋಷಣೆಯಡಿ ಮರ್ಕಝ್ ವತಿಯಿಂದ ಅಂತರ ರಾಷ್ಟ್ರೀಯ ಮೀಲಾದ್ ಸಮ್ಮೇಳನ ಸೆ.13ರಂದು ಕಲ್ಲಿಕೋಟೆಯ ಟ್ರೇಡ್ ಸೆಂಟರ್‌ನಲ್ಲಿ ನಡೆಯಲಿದೆ.
ಅರಬ್ ಗಾಯನ ತಂಡ ಅಲ್‌ಹುಬ್ ಟ್ರೂಪ್‌ನ ನಬಿ ಕೀರ್ತನ ಮಜ್ಲಿಸ್ ಮತ್ತು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್‌ರ ವಾರ್ಷಿಕ ಮದ್ಹುರ‌್ರಸೂಲ್ ಪ್ರಭಾಷಣ ನಡೆಯಲಿದೆ.
ಸಂಜೆ 4:30ಕ್ಕೆ ಬುರ್ದಾ ಪಠಣದೊಂದಿಗೆ ಸಾರ್ವಜನಿಕ ಸಮ್ಮೇಳನಕ್ಕೆ ಆರಂಭವಾಗಲಿದೆ. ಸಮಸ್ತ ಉಪಾಧ್ಯಕ್ಷ ಸಯ್ಯಿದ್ ಅಲಿ ಬಾಫಖಿ ತಂಳ್ ದುಆಗೈಯಲಿದ್ದಾರೆ. ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಅಧ್ಯಕ್ಷ ಇ. ಸುಲೈಮಾನ್ ಮುಸ್ಲಿಯಾರ್ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಮರ್ಕಝ್ ಡೈರೆಕ್ಟರ್ ಜನರಲ್ ಸಿ. ಮುಹಮ್ಮದ್ ಫೈಝಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.