×
Ad

ಫೆ.14ರಂದು ‘ಅತ್ತಕ್‌ರೀಂ’ ಸ್ವಾಗತ ಸಮಿತಿ ರಚನೆ

Update: 2024-02-13 21:05 IST

ಹಸನುಲ್ ಅಹ್ದಲ್ ತಂಙಳ್

ಕಾಸರಗೋಡು: ದೀನಿ ಜ್ಞಾನ ಸೇವೆಯ ದರ್ಸ್ ರಂಗದಲ್ಲಿ 40 ವರ್ಷಗಳನ್ನು ಪೂರೈಸಿ ಹಲವಾರು ಉನ್ನತ ಉಲಮಾ ಗಳನ್ನು ಸಮಾಜಕ್ಕೆ ಸಮರ್ಪಿಸಿದ ಉತ್ತರ ಕೇರಳ ಹಾಗೂ ದಕ್ಷಿಣ ಕರ್ನಾಟಕದ ಆಧ್ಯಾತ್ಮಿಕ ನಾಯಕ, ಜಂಇಯ್ಯತುಲ್ ಉಲಮಾ ಕಾಸರಗೋಡು ಜಿಲ್ಲಾ ಮುಶಾವರ ನಾಯಕರು ಮುಹಿಮ್ಮಾತ್ ಸಂಸ್ಥೆಯ ಉಪಾಧ್ಯಕ್ಷ ಸೈಯದ್ ಹಸನುಲ್ ಅಹ್ದಲ್ ತಂಙಳ್‌ರ ಶಿಷ್ಯ ವೃಂದ ಹಾಗೂ ಸುನ್ನಿ ಸಂಘ ಕುಟುಂಬದ ವತಿಯಿಂದ ಗೌರವಿಸುವ ಅತ್ತಕ್‌ರೀಂ ಸಮ್ಮೇಳನದ ಸ್ವಾಗತ ಸಮಿತಿ ರಚನೆಯು ಫೆ.14ರಂದು ಮಧ್ಯಾಹ್ನ 2ಕ್ಕೆ ಕಾಸರಗೋಡು ಸಿಟಿ ಟವರಿನಲ್ಲಿ ನಡೆಯಲಿಕ್ಕಿದೆ.

ಕಾರ್ಯಕ್ರಮವನ್ನು ಮಾಣಿಕ್ಕೋತ್ ಅಬ್ದುಲ್ಲಾ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ. ಸೈಯದ್ ಹಾಮಿದ್ ಅನ್ವರ್ ಅಲ್ ಅಹ್ದಲ್ ತಂಙಳ್ ವಿಷಯ ಮಂಡಿಸಲಿದ್ದಾರೆ.

ಸೈಯದ್ ಮುತ್ತುಕೋಯ ತಂಙಳ್ ಕಣ್ಣವಂ, ಸೈಯದ್ ಕುಂಞಿಕೋಯ ಸಅದಿ ತಂಙಳ್ ಸುಳ್ಯ, ಸೈಯದ್ ಶಂಸುದ್ದೀನ್ ಬಾ ಅಲವಿ ತಂಙಳ್ ಗಾಂಧಿನಗರ, ಪಳ್ಳಂಗೋಡ್ ಅಬ್ದುಲ್ ಖಾದರ್ ಮದನಿ, ಎಸ್.ಪಿ.ಹಂಝ ಸಖಾಫಿ ಬಂಟ್ವಾಳ, ಅಬ್ದುಲ್ ಲತೀಫ್ ಸಖಾಫಿ ಮದನೀಯಂ, ಡಾ.ಅಬ್ದುಲ್ ರಶೀದ್ ಸಖಾಫಿ ಕಕ್ಕಿಂಜೆ, ಇಸ್ಮಾಯೀಲ್ ಸಖಾಫಿ ಕೊಂಡಂಗೇರಿ, ಹಾಫಿಝ್ ಅಬ್ದುಲ್ ಸಲಾಂ ನಿಝಾಮಿ ಮತ್ತಿತರರ ಉಲಮಾ, ಉಮರ ನಾಯಕರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News