ಜು.15: ದ.ಕ. ಜಿಲ್ಲಾ ವ್ಯಾಪ್ತಿಯಲ್ಲಿ ಸೌಹಾರ್ದ ಸಂಚಾರ
ಮಂಗಳೂರು: ಎಸ್.ವೈ.ಎಸ್ ರಾಜ್ಯ ಸಮಿತಿಯು ಹೃದಯ ಹೃದಯಗಳನ್ನು ಬೆಸೆಯೋಣ ಎಂಬ ಘೋಷಣೆಯೊಂದಿಗೆ ಜುಲೈ 14,15,16ರಂದು ಕುಂದಾಪುರದಿಂದ ಸುಳ್ಯ ತನಕ ನಡೆಯುವ ಸೌಹಾರ್ದ ಸಂಚಾರವು ದ.ಕ ಜಿಲ್ಲೆಯಲ್ಲಿ ಮಂಗಳವಾರ ನಡೆಯಲಿದೆ.
ಬೆಳಗ್ಗೆ 7:30ಕ್ಕೆ ಕನ್ನಂಗಾರ್ ದರ್ಗಾ ಝಿಯಾರತ್ ನೊಂದಿಗೆ ಆರಂಭವಾಗುವ ಎರಡನೇ ದಿನದ ಸೌಹಾರ್ದ ಸಂಚಾರವು ಬೆಳಿಗ್ಗೆ 8 ಗಂಟೆಗೆ ಬಪ್ಪನಾಡುನಿಂದ ಸೌಹಾರ್ದ ಕಾಲ್ನಡಿಗೆ ಜಾಥಾವು ಮುಲ್ಕಿ ತನಕ ಬಂದು, ಮುಲ್ಕಿಯಲ್ಲಿ ಶಾಹುಲ್ ಹಮೀದ್ ಮದನಿ ಸಂದೇಶ ಭಾಷಣ ಮಾಡಲಿದ್ದಾರೆ.
ಬೆಳಿಗ್ಗೆ 9 ಗಂಟೆಗೆ ಗೋವಿಂದದಾಸ್ ಕಾಲೇಜು ಕಡೆಯಿಂದ ಸುರತ್ಕಲ್ ಜಂಕ್ಷನ್ ತನಕ ಸೌಹಾರ್ದ ಕಾಲ್ನಡಿಗೆ ಜಾಥಾವು ಬಂದು, ಸುರತ್ಕಲ್ ಜಂಕ್ಷನ್ ನಲ್ಲಿ ಅಬೂಸುಫ್ಯಾನ್ ಮದನಿ ಸಂದೇಶ ಭಾಷಣ ಮಾಡಲಿದ್ದಾರೆ.
ಬೆಳಿಗ್ಗೆ 11 ಗಂಟೆಗೆ ಬಾವುಟಗುಡ್ಡೆಯಿಂದ ಕ್ಲಾಕ್ ಟವರ್ ತನಕ ಸೌಹಾರ್ದ ಕಾಲ್ನಡಿಗೆ ಜಾಥಾವು ಬಂದು, ಕ್ಲಾಕ್ ಟವರ್ ನಲ್ಲಿ ಡಾ ಅಬ್ದುರ್ರಶೀದ್ ಝೈನಿ ಕಾಮಿಲ್ ಸಂದೇಶ ಭಾಷಣ ಮಾಡಲಿದ್ದಾರೆ.
ಮದ್ಯಾಹ್ನ 2 ಗಂಟೆಗೆ ಅರ್ಕುಳದಿಂದ ಫರಂಗಿಪೇಟೆ ತನಕ ಸೌಹಾರ್ದ ಸಂಚಾರ ಜಾಥಾವು ಬಂದು, ಫರಂಗಿಪೇಟೆ ಜಂಕ್ಷನ್ ನಲ್ಲಿ ಬಶೀರ್ ಮದನಿ ಕೂಳೂರು ಸಂದೇಶ ಭಾಷಣ ಮಾಡಲಿದ್ದಾರೆ.
ಸಂಜೆ 4 ಗಂಟೆಗೆ ಕೈಕಂಬದಿಂದ ಬಿಸಿರೋಡ್ ತಾಲೂಕು ಕಚೇರಿ ತನಕ ಸೌಹಾರ್ದ ಕಾಲ್ನಡಿಗೆ ಜಾಥಾವು ಬಂದು, ತಾಲೂಕು ಕಚೇರಿ ಮುಂಭಾಗದಲ್ಲಿ ಕೆ.ಎಂ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ಸಂದೇಶ ಭಾಷಣ ಮಾಡಲಿದ್ದಾರೆ.
ಸಂಜೆ 5 ಗಂಟೆಗೆ ಕಲ್ಲಡ್ಕ ಕೆಸಿರೋಡ್ ನಿಂದ ಕಲ್ಲಡ್ಕ ಜಂಕ್ಷನ್ ತನಕ ಸೌಹಾರ್ದ ಕಾಲ್ನಡಿಗೆ ಜಾಥಾವು ಬಂದು ಕಲ್ಲಡ್ಕ ಜಂಕ್ಷನ್ ನಲ್ಲಿ ಡಾ ಅಬ್ದುರ್ರಶೀದ್ ಝೈನಿ ಕಾಮಿಲ್ ಸಂದೇಶ ಭಾಷಣ ಮಾಡಲಿದ್ದಾರೆ.
ಈ ಸೌಹಾರ್ದ ಸಂಚಾರದಲ್ಲಿ ವಿವಿಧ ಮಠಗಳ ಸ್ವಾಮೀಜಿಗಳು, ಕ್ರೈಸ್ತ ಧರ್ಮ ಗುರುಗಳು, ಮುಸ್ಲಿಂ ಧಾರ್ಮಿಕ ನಾಯಕರು, ಹಿಂದು, ಮುಸ್ಲಿಂ, ಕ್ರೈಸ್ತರು, ಸಾಮಾಜಿಕ, ಶೈಕ್ಷಣಿಕ ನಾಯಕರು, ಸೌಹಾರ್ದತೆಯ ಸಂದೇಶವನ್ನು ಸಾರುತ್ತಾ ಸ್ನೇಹದ, ಪ್ರೀತಿಯ, ಸಹಬಾಳ್ವೆಯ ದಿಟ್ಟ ಹೆಜ್ಜೆಗಳನ್ನು ಇಟ್ಟು ಮಾನವೀಯತೆಯ ಸಂದೇಶವನ್ನು ಮನುಕುಲಕ್ಕೆ ನೀಡಲಿದ್ದಾರೆ ಎಂದು ಎಸ್.ವೈ.ಎಸ್ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.