×
Ad

ಫೆ.16: ಮುಡಿಪುವಿನಲ್ಲಿ ಪ್ರವಚನ ಕಾರ್ಯಕ್ರಮ

Update: 2024-02-15 18:23 IST

ಮುಡಿಪು, ಫೆ.15: ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ ಮಂಗಳೂರು ಇದರ ದೇರಳಕಟ್ಟೆ ಘಟಕದ ಆಶ್ರಯದಲ್ಲಿ ಅಂಧಕಾರದಿಂದ ಪ್ರಕಾಶದೆಡೆಗೆ ಎಂಬ ಧ್ಯೇಯವಾಕ್ಯದಲ್ಲಿ ಧಾರ್ಮಿಕ ಪ್ರವಚನ ಕಾರ್ಯಕ್ರಮವು ಫೆ.16ರಂದು ಮಗ್ರಿಬ್ ನಮಾಝ್ ಬಳಿಕ ಮುಡಿಪು ಪಂಚಾಯತ್ ಮೈದಾನಲ್ಲಿ ನಡೆಯಲಿದೆ.

ಮುಸ್ತಫಾ ದಾರಿಮಿ ಬ್ಯಾರಿ ಭಾಷೆಯಲ್ಲಿ ಅಮಲು ಪದಾರ್ಥಕ್ಕೆ ಬಲಿಯಾಗುತ್ತಿರುವ ಯುವ ಸಮೂಹ ಎಂಬ ವಿಷಯದಲ್ಲಿ, ಮೌಲವಿ ಉನೈಸ್ ಪಾಪಿನಶ್ಶೇರಿ ಮಲಯಾಳಂ ಭಾಷೆಯಲ್ಲಿ ಸಿರಾತೇ ಮುಸ್ತಖೀಮ್ ಎಂಬ ವಿಷಯದಲ್ಲಿ ಪ್ರವಚನ ನೀಡಲಿದ್ದಾರೆ.

ಅತಿಥಿಗಳಾಗಿ ಬಶೀರ್ ಶಾಲಿಮಾರ್, ಅಬ್ದುಲ್ ರಹಿಮಾನ್ ಉಪ್ಪಿನಂಗಡಿ, ಮುಹಮ್ಮದ್ ಯಾಸೀನ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News