×
Ad

ಜ.16: ಸಜಿಪ ಉಸ್ತಾದ್ ಮಹಿಳಾ ಶರೀಅತ್ ಕಾಲೇಜ್ ಸನದುದಾನ, ಸ್ಕೂಲ್ ಕಟ್ಟಡ ಉದ್ಘಾಟನೆ

Update: 2025-01-14 19:03 IST

ಬಂಟ್ವಾಳ, ಜ.14: ಸಜೀಪ ಕೇಂದ್ರ ಜಮಾಅತ್ ಕಮಿಟಿ ಆಧೀನದಲ್ಲಿರುವ ಹಾಜಿ ಎಸ್.ಮುಹಮ್ಮದ್ ಭಾರತ್ ಮೆಮೋರಿಯಲ್ ನೂರಿಯ್ಯಾ ಪಬ್ಲಿಕ್ ಸ್ಕೂಲ್ ಕಟ್ಟಡದ ಉದ್ಘಾಟನಾ ಸಮಾರಂಭ ಮತ್ತು ಸಜಿಪ ಉಸ್ತಾದ್ ಮಹಿಳಾ ಶರೀಅತ್ ಹಾಗೂ ಪಿಯು ಕಾಲೇಜ್ ಸಜಿಪನಡು ಇದರ 9ನೇ ವಾರ್ಷಿಕ ಹಾಗೂ 3ನೇ ಸನದುದಾನ ಜ.16ರಂದು ಪೂರ್ವಾಹ್ನ 11:30ಕ್ಕೆ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಜಿ ಎಸ್.ಅಬ್ದುಲ್ ರಝಾಕ್ ವಹಿಸಲಿದ್ದಾರೆ. ಕಟ್ಟಡವನ್ನು ಸೈಯದ್ ಅಲಿ ತಂಙಳ್ ಕುಂಬೋಳ್ ಉದ್ಘಾಟಿಸಲಿದ್ದಾರೆ.

ರಾತ್ರಿ 7:30 ಗಂಟೆಗೆ ನಡೆಯುವ ಸಜೀಪ ಉಸ್ತಾದ್ ಮಹಿಳಾ ಶರೀಅತ್ ಹಾಗೂ ಪಿಯು ಕಾಲೇಜ್ ಇದರ ಸನದುದಾನ ನೇತೃತ್ವವನ್ನು ಶೈಖುನಾ ಎಂ.ಟಿ ಅಬ್ದುಲ್ಲ ಮುಸ್ಲಿಯಾರ್ ವಹಿಸಲಿದ್ದಾರೆ. ಸನದುದಾನ ಭಾಷಣವನ್ನು ಶೈಖುನಾ ಸುಲೈಮಾನ್ ಫೈಝಿ ಚುಂಗತರ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಯೆನೆಪೊಯ ವಿವಿಯ ಕುಲಪತಿ ಡಾ.ಅಬ್ದುಲ್ಲ ಕುಂಞಿ, ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೋಹನ್ ಆಳ್ವ, ಕೆಎಸ್‌ಒ ಅಲ್‌ಮುಝೈನ್‌ನ ಹಾಜಿ ಝಕರಿಯಾ ಜೋಕಟ್ಟೆ, ಮೋಯಿನ್ ಕುಟ್ಟಿ ಮಾಸ್ಟರ್, ಎಸ್.ಎಂ.ಮುಸ್ತಫ, ಕೆ.ಪಿ.ಮುಹಮ್ಮದ್, ಎಸ್.ಎನ್.ಇಕ್ಬಾಲ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News