×
Ad

ಜೂ.17: ಡಾ. ಬಾಬು ಜಗಜೀವನ್ ರಾಮ್ ರಾಜ್ಯ ಪ್ರಶಸ್ತಿ ವಿಜೇತ ಕರಿಯಗೆ ಅಭಿನಂದನಾ ಸಮಾರಂಭ

Update: 2025-06-16 22:08 IST

ಮಂಗಳೂರು: ಕರ್ನಾಟಕ ಸರಕಾರವು ವಾರ್ಷಿಕವಾಗಿ ಕೊಡಮಾಡುವ 2025ನೇ ಸಾಲಿನ ಪ್ರತಿಷ್ಠಿತ ಡಾ. ಬಾಬು ಜಗಜೀವನ್ ರಾಮ್ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪಡೆದಿರುವ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಜಿಲ್ಲಾ ಕೋರ್ ಗ್ರೂಫ್ ಸದಸ್ಯರೂ, ಜನಪರ ಹೋರಾಟಗಾರರೂ, ಚಿಂತಕರೂ ಆದ ಕರಿಯ ಕೆ. ಇವರಿಗೆ ಮಂಗಳವಾರ, ಸಂಜೆ 5 ಗಂಟೆಗೆ ಸಹೋದಯ ಸಭಾಂಗಣ, (ಶಾಂತಿ ನಿಲಯದ ಹತ್ತಿರ)ಅಭಿನಂದನಾ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದೆ.

ಸಮಾರಂಭದಲ್ಲಿ ಅಭಿನಂದನಾ ಭಾಷಣ : ಮುನೀರ್ ಕಾಟಿಪಳ್ಳ (ಕಾರ್ಯದರ್ಶಿ, ಸಿಪಿಐ(ಎಂ) ದ.ಕ. ಜಿಲ್ಲೆ)ಅಭಿನಂದನಾ ಭಾಷಣ ಮಾಡಲಿದ್ದಾರೆ. ಕರಿಯ ಕೆ. (ಪ್ರಶಸ್ತಿ ಪುರಸ್ಕೃತರು) ಅಭಿನಂದನೆ ಸ್ವೀಕರಿಸಲಿದ್ದಾರೆ.

ಶೇಖರ್ ವಾಮಂಜೂರು (ರಾಜ್ಯ ಸಮಿತಿ ಸದಸ್ಯರು, ಕ.ಆ.ಹ.ಸ.ಸ.)ಅಧ್ಯಕ್ಷ ತೆವಹಿ ಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ವಾಸುದೇವ ಉಚ್ಚಿಲ್ (ಸಾಹಿತಿಗಳು ಹಾಗೂ ಪ್ರಗತಿಪರ ಚಿಂತಕರು) ಶ್ಯಾಂ ಸುಂದರ್ (ವಿಚಾರವಾದಿ ಹಾಗೂ ರಂಗ ಕಲಾವಿದರು) ಭಾಗವಹಿಸಲಿದ್ದಾರೆ.

ಕರಿಯ ಕೆ. ಇವರು ಆದಿವಾಸಿ ಕೊರಗ ಸಮುದಾಯದ ಹಿರಿಯರಾಗಿದ್ದಾರೆ. ಸಮುದಾಯದ ಬಗ್ಗೆ ಅಪಾರ ವಾದ ಜನಾಂಗೀಯ ಜ್ಞಾನವನ್ನು ಸಂಪಾದಿಸಿರುವ ಇವರು ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿರುತ್ತಾರೆ. ವಾಮಂಜೂರು ಶ್ರೀ ಕೊರಗಜ್ಜ ಸೇವಾ ಟ್ರಸ್ಟ್ ಇದರ ಪದಾಧಿಕಾರಿ ಯಾಗಿದ್ದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ವಾಮಂಜೂರು ಘಟಕದ ಅಧ್ಯಕ್ಷರಾಗಿ ದ್ದಾರೆ. ಪೌರ ಕಾರ್ಮಿಕರ ಹಕ್ಕು ಮತ್ತು ಸೇವಾಭದ್ರತೆ ಸೌಲಭ್ಯಕ್ಕಾಗಿ ಹೋರಾಟಗಾರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News