×
Ad

ಅ.17, 18ರಂದು ಪಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಐಇಇಇ ಡಿಸ್ಕವರ್ 25’

Update: 2025-10-15 17:09 IST

ಮಂಗಳೂರು, ಅ.15: ಐಇಇಇ ಮಂಗಳೂರು ಉಪ ವಿಭಾಗದ ವತಿಯಿಂದ 9ನೇ ಅಂತಾರಾಷ್ಟ್ರೀಯ ‘ಐಇಇಇ ಡಿಸ್ಕವರ್ 25’ ಸಮ್ಮೇಳನವು ನಡುಪದವು ಪಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅ.17 ಮತ್ತು 18ರಂದು ನಡೆಯಲಿದೆ.

ಈ ಬಗ್ಗೆ ನಗರದ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪಿಎ ಎಜುಕೇಶನಲ್ ಟ್ರಸ್ಟ್ ನ ಡೀನ್ (ವಿದ್ಯಾರ್ಥಿ ಕಾರ್ಯ ವಿಭಾಗ) ಡಾ.ಸಯ್ಯದ್ ಅಮೀನ್ ಅಹ್ಮದ್, ಸಮ್ಮೇಳನವು ಡಿಸ್ಟ್ರಿಬ್ಯೂಟೆಡ್ ಕಂಪ್ಯೂಟಿಂಗ್, ವಿ.ಎಲ್.ಎಸ್.ಐ., ಇಲೆಕ್ಟ್ರಿಕಲ್ ಸರ್ಕ್ಯೂಟ್ಸ್ ಮತ್ತು ರೊಬೋಟಿಕ್ಸ್ ವಿಷಯದಲ್ಲಿ ನಡೆಯಲಿದೆ ಎಂದರು.

ಸಮ್ಮೇಳನಕ್ಕೆ ಸುಮಾರು 526 ಪ್ರಬಂಧಗಳು ಸಲ್ಲಿಕೆಯಾಗಿದ್ದು, 136 ಪ್ರಬಂಧಗಳು ಮಂಡನೆಗೆ ಆಯ್ಕೆಯಾಗಿವೆ. ಮಂಡಿಸಲ್ಪಟ್ಟ ಎಲ್ಲಾ ಪ್ರಬಂಧಗಳು ಐಇಇಇ ಕಾನ್ಫರೆನ್ಸ್ ಪಬ್ಲಿಕೇಶನ್ ಪ್ರೋಗ್ರಾಂ ಡಿಜಿಟಲ್ ಲೈಬ್ರರಿಯಲ್ಲಿ ಪ್ರಕಟನೆಗಾಗಿ ಸಲ್ಲಿಸಲಾಗುತ್ತದೆ. ಸಮ್ಮೇಳನವು ಸಂಶೋಧಕರು, ಶೈಕ್ಷಣಿಕ ಮತ್ತು ಕೈಗಾರಿಕಾ ತಜ್ಞರು ಹೊಸ ತಂತ್ರಜ್ಞಾನ ಅವಿಷ್ಕಾರಗಳನ್ನು ಹಂಚಿಕೊಳ್ಳಲು ಹಾಗೂ ಪರಸ್ಪರ ಚರ್ಚಿಸುವ ವೇದಿಕೆಯಲಾಗಲಿದೆ ಎಂದವರು ತಿಳಿಸಿದರು.

ಅ. 17ರಂದು ಉದ್ಘಾಟನಾ ಸಮಾರಂಭದಲ್ಲಿ ಇನ್ಫೋಸಿಸ್ ಉಪಾಧ್ಯಕ್ಷ ಹಾಗೂ ಹೆಡ್ ಡೆಲಿವೆರಿ ರಿಸ್ಕ್ ಮ್ಯಾನೇಜ್ಮೆಂಟ್ ನ ವಾಸುದೇವ ಕಾಮತ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಎನ್ ಐಟಿ ಕ್ಯಾಲಿಕಟ್ ನ ಪ್ರೊ. ಹಾಗೂ ಐಇಇಇ ರೀಜನಲ್ 10 ಏಷ್ಯಾ ಪೆಸಿಫಿಕ್ ನ ನಿರ್ದೇಶಕ ಡಾ.ಸಮೀರ್ ಎಸ್.ಎಂ. ಭಾಗವಹಿಸಲಿದ್ದಾರೆ. ಇದೇ ಸಂದರ್ಭ ಸಿಡಿಎಸಿನ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಸುದರ್ಶನ ಪ್ರಾಸ್ತಾವಿಕ ಉಪನ್ಯಾಸ ನೀಡಲಿದ್ದಾರೆ. ಪಿಎ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ರಮೀಸ್ ಎಂ.ಕೆ. ಮತ್ತು ಜೆಎನ್ಎನ್ಸಿಇ ಶಿವಮೊಗ್ಗ ಕಾಲೇಜಿನ ಡೀನ್ ಡಾ.ಎಸ್.ವಿ. ಸತ್ಯನಾರಾಯಣ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪ್ರಾಂಶುಪಾಲ ಡಾ.ರಮೀಸ್ ಎಂ.ಕೆ., ಉಪ ಪ್ರಾಂಶುಪಾಲೆ ಡಾ.ಶರ್ಮಿಳಾ ಕುಮಾರಿ, ಎಐಎಂಎಲ್ ನ ವಿಭಾಗಾಧ್ಯಕ್ಷ ಡಾ.ಮುಹಮ್ಮದ್ ಝಾಕಿರ್, ಐಇಇಇ ಮಂಗಳೂರು ಉಪ ವಿಭಾಗದ ಜಂಟಿ ಕಾರ್ಯದರ್ಶಿ ಡಾ. ಹರಿ ವಿನೋದ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News