×
Ad

ಮಾ.17-19: ರೋಶ್ನಿ ನಿಲಯದಲ್ಲಿ ಅಂತಾರಾಷ್ಟ್ರೀಯ ನ್ಯಾಯ ವಿಜ್ಞಾನ ಸಮಾವೇಶ 'ಫೋರೆನ್ಸಿಕ್ ಫ್ಯೂಷನ್

Update: 2026-03-08 12:45 IST

Photo credit: wikimedia

ಮಂಗಳೂರು: ಮಂಗಳೂರಿನ ಸ್ಕೂಲ್ ಆಫ್ ಸೋಶಿಯಲ್ ವರ್ಕ್, ರೋಶ್ನಿ ನಿಲಯದ ಕ್ರಿಮಿನಾಲಜಿ ಮತ್ತು ನ್ಯಾಯ ವಿಜ್ಞಾನ (Forensic Science) ಸ್ನಾತಕೋತ್ತರ ವಿಭಾಗದ ವತಿಯಿಂದ 'CRIFO 2K26 – ಫೋರೆನ್ಸಿಕ್ ಫ್ಯೂಷನ್' ಎಂಬ ಎರಡು ದಿನಗಳ ಅಂತಾರಾಷ್ಟ್ರೀಯ ಸಮಾವೇಶವನ್ನು ಮಾ.17 ಮತ್ತು 18ರಂದು ಕಾಲೇಜಿನ ಮರಿಯಾ ಪೈವಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಅಪರಾಧ ತನಿಖೆ ಮತ್ತು ನ್ಯಾಯ ವಿಜ್ಞಾನ ಕ್ಷೇತ್ರದಲ್ಲಿನ ನೂತನ ಆವಿಷ್ಕಾರಗಳ ಬಗ್ಗೆ ಚರ್ಚಿಸಲು ಈ ಸಮಾವೇಶವು ಒಂದು ಜಾಗತಿಕ ವೇದಿಕೆಯನ್ನು ಒದಗಿಸಲಿದೆ. ದೇಶ-ವಿದೇಶಗಳ ಖ್ಯಾತ ತಜ್ಞರು ವಿವಿಧ ಗೋಷ್ಠಿಗಳನ್ನು ನಡೆಸಿಕೊಡಲಿದ್ದಾರೆ.

ಕಾರ್ಯಕ್ರಮದ ಪ್ರಮುಖಾಂಶಗಳು:

ತಜ್ಞರ ಗೋಷ್ಠಿಗಳು: ಸೈಬರ್ ಸೆಕ್ಯೂರಿಟಿ, ಡಿಜಿಟಲ್ ಫೋರೆನ್ಸಿಕ್ ಮತ್ತು ಫೋರೆನ್ಸಿಕ್ ಟಾಕ್ಸಿಕಾಲಜಿ ಕುರಿತು ವಿಶೇಷ ಉಪನ್ಯಾಸಗಳು.

ಸ್ಪರ್ಧೆಗಳು: ನ್ಯಾಯ ವಿಜ್ಞಾನಕ್ಕೆ ಸಂಬಂಧಿಸಿದ ರಸಪ್ರಶ್ನೆ, ಥೀಮ್ಯಾಟಿಕ್ ರೀಲ್ ಮೇಕಿಂಗ್, ಸ್ಟ್ರೆಸ್ ಇಂಟರ್ ವ್ಯೂ ಮತ್ತು ಚರ್ಚಾ ಸ್ಪರ್ಧೆಗಳು.

ಪ್ರಬಂಧ ಮಂಡನೆ: ಸಂಶೋಧಕರು ಮತ್ತು ವಿದ್ಯಾರ್ಥಿಗಳಿಂದ ವಿವಿಧ ತಾಂತ್ರಿಕ ವಿಷಯಗಳ ಕುರಿತು ಸಂಶೋಧನಾ ಪ್ರಬಂಧಗಳ ಮಂಡನೆ.

ನೋಂದಣಿ ಮಾಡಿಕೊಳ್ಳಲು ಮಾ.13ರಂದು ಕೊನೆಯ ದಿನವಾಗಿದೆ. ಸಮಾವೇಶದಲ್ಲಿ ಭಾಗವಹಿಸುವ ಎಲ್ಲಾ ಪ್ರತಿನಿಧಿಗಳಿಗೆ ಪ್ರಮಾಣಪತ್ರವನ್ನು ನೀಡಲಾಗುವುದು ಹಾಗೂ ಕಾರ್ಯಕ್ರಮದ ದಿನಗಳಂದು ಊಟ ಮತ್ತು ಉಪಹಾರದ ವ್ಯವಸ್ಥೆ ಇರಲಿದೆ.

ಕಾಲೇಜಿನ ಪ್ರಾಂಶುಪಾಲ ಡಾ.ಸೋಫಿಯಾ ಎನ್. ಫೆರ್ನಾಂಡಿಸ್ ಮತ್ತು ಸಂಯೋಜಕಿ ಡಾ.ಸರಿತಾ ಡಿಸೋಜ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 9743633882 ಅಥವಾ 8217294693 ಅನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News