×
Ad

Natekal | ಹ್ಯುಮಾನಿಟಿ ಫೌಂಡೇಶನ್ ವತಿಯಿಂದ ಇಫ್ತಾರ್ ಕೂಟ

Update: 2026-03-08 12:04 IST

ನಾಟೆಕಲ್: ಹ್ಯುಮಾನಿಟಿ ಫೌಂಡೇಶನ್ ಟ್ರಸ್ಟ್ ಆಶ್ರಯದಲ್ಲಿ ಇಫ್ತಾರ್ ಕೂಟ ಮತ್ತು ಉಚಿತವಾಗಿ ದಫನ ಭೂಮಿ ತೋಡುವವರಿಗೆ ಅಭಿನಂದನೆ ಕಾರ್ಯಕ್ರಮ ನಾಟೆಕಲ್ ಮೈದಾನದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್, ಮಳೆಗಾಲದಲ್ಲಿ ಕಬರ್ ತೋಡುವವರಿಗೆ ದಫನ ಮಾಡಲು ಅನುಕೂಲ ಆಗುವಂತೆ ರೈನ್ ಕೋಟ್, ಸ್ಟ್ಯಾಂಡ್ ನ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಉಚಿತವಾಗಿ ಕಬರ್ ತೋಡುವ ಒಟ್ಟು 15 ಜಮಾಅತ್ ನ 80 ಮಂದಿಯನ್ನು ಸನ್ಮಾನಿಸಲಾಯಿತು.

ಹ್ಯುಮಾನಿಟಿ ಫೌಂಡೇಶನ್ ಅಧ್ಯಕ್ಷ ನಾಸಿರ್ ಸಾಮಣಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಯ್ಯಿದ್ ಅಮೀರ್ ತಂಙಳ್ ದುಆಗೈದರು.

ಕಾರ್ಯಕ್ರಮದಲ್ಲಿ ಟಿಎಸ್.ಅಬ್ದುಲ್ಲಾ, ಮೇಲ್ತೆನೆ ಗೌರವ ಅಧ್ಯಕ್ಷ ಆಲಿ ಕುಂಞಿ ಪಾರೆ, ಹೈದರ್ ಪರ್ತಿಪ್ಪಾಡಿ, ಪುಷ್ಟಿ ಮುಹಮ್ಮದ್, ದೇರಳಕಟ್ಟೆ ಮಸೀದಿ ಖತೀಬ್ ತಾಜುದ್ದೀನ್ ರಹ್ಮಾನಿ, ಟಿ.ಎಸ್.ಅಬೂಬಕರ್, ಯೂಸುಫ್ ಬಾವ, ಮೊಹಮ್ಮದ್ ಮೋನು, ಮುಸ್ತಫ ಮಲಾರ್, ಉಪಾಧ್ಯಕ್ಷರಾದ ಖಲಂದರ್, ಆಸಿಫ್ ತಾಜ್, ಕೋಶಾಧಿಕಾರಿ ಇಲ್ಯಾಸ್ ಚಾರ್ಮಾಡಿ, ಮಾಧ್ಯಮ ಕಾರ್ಯದರ್ಶಿ ಬಶೀರ್ ಕಲ್ಕಟ್ಟ, ಕಾರ್ಯದರ್ಶಿ ಸೈಫುಲ್ಲಾ ಸೋಮೇಶ್ವರ ಮತ್ತಿತರರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಹಮೀದ್ ಪಜೀರ್ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News