ನ.18ಕ್ಕೆ ಮಂಜನಾಡಿ ಅಲ್ ಮದೀನಾದಲ್ಲಿ 'ಮದನೀಯಂ'
ಉಳ್ಳಾಲ, ನ.17: ಮಂಜನಾಡಿ ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ನಲ್ಲಿ ನ.18 ರಂದು ಸಂಜೆ 6:30ಕ್ಕೆ ಆಧ್ಯಾತ್ಮಿಕ ಪ್ರಾರ್ಥನಾ ಸಂಗಮ 'ಮದನೀಯಂ' ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಮ್ಮೇಳನದ ವೈಸ್ ಕನ್ವೀನರ್ ಕೆ.ಎಂ.ಕೆ.ಮಂಜನಾಡಿ ತಿಳಿಸಿದ್ದಾರೆ.
ತೊಕ್ಕೊಟ್ಟಿನಲ್ಲಿರುವ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ತನ್ನ ಸೇವೆಯ 30 ಸಂವತ್ಸರಗಳನ್ನು ಪೂರೈಸುತ್ತಿದ್ದು, ಆ ಪ್ರಯುಕ್ತ ಸಾಮೂಹಿಕ ವಿವಾಹ ಸಹಿತ 30 ಜನಪರ ಯೋಜನೆಗಳಾದ 'ದಿ 30 ಹ್ಯಾಪನ್ಸ್' ಅನ್ನುವ ಹೆಸರಿನಡಿ 30 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 2024ರ ಫೆ.1ರಿಂದ 4ರ ತನಕ 30ನೇ ಮಹಾ ವಾರ್ಷಿಕ ಹಾಗೂ ಸನದು ದಾನ ಸಮ್ಮೇಳನ ನಡೆಯಲಿದೆ. ಇದರ ಪೂರ್ವಭಾವಿಯಾಗಿ ಕ್ಯಾಂಪಸ್ ನಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಆ ಪ್ರಯುಕ್ತ ವಿದ್ವಾಂಸ ಅಬ್ದುಲ್ಲತೀಫ್ ಸಖಾಫಿ ನೇತೃತ್ವದಲ್ಲಿ ಮದನೀಯಂ ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಸೈಯದ್ ಅಶ್ರಫ್ ತಂಙಳ್ ಆದೂರು, ಅಲ್ ಮದೀನ ಮ್ಯಾನೇಜಿಂಗ್ ಡೈರೆಕ್ಟರ್ ಅಬ್ದುಲ್ ಖಾದರ್ ಸಖಾಫಿ ಸಹಿತ ಸಾದಾತುಗಳು, ವಿದ್ವಾಂಸರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಾಮೂಹಿಕ ವಿವಾಹ ಸಮಿತಿಯ ಅಧ್ಯಕ್ಷ ಫಾರೂಕ್ ಅಬ್ಬಾಸ್ ಉಳ್ಳಾಲ್, ರೌಳ ಮದೀನ ಆಧ್ಯಾತ್ಮಿಕ ಮಜ್ಲಿಸ್ ರೂವಾರಿ ಮುಹಮ್ಮದ್ ಕುಂಞಿ ಅಮ್ಜದಿ, ಅಬೂ ಅನಸ್ ಉಳ್ಳಾಲ ಉಪಸ್ಥಿತರಿದ್ದರು.