ಜ.18: ಉಲಮಾ ಸಮಾವೇಶದಲ್ಲಿ ಅಧ್ಯಯನ ತರಗತಿ
ಮಂಗಳೂರು, ಜ.17: ಕರ್ನಾಟಕ ರಾಜ್ಯ ಸುನ್ನೀ ಜಂಇಯತುಲ್ ಉಲಮಾ ವತಿಯಿಂದ ಮಂಜನಾಡಿಯ ಅಲ್ ಮದೀನಾದಲ್ಲಿ ನಡೆಯುತ್ತಿರುವ ಉಲಮಾ ಸಮಾವೇಶದ ಎರಡನೆ ದಿನವಾದ ಜ.18ರಂದು ʼವಿದ್ವಾಂಸರು ಹೀಗಿರಬೇಕುʼ ಎಂಬ ವಿಷಯದಲ್ಲಿ ಮುಹಮ್ಮದ್ ಸಅದಿ ವಳವೂರು, ಱನಾಸ್ತಿಕತೆಯ ಮೌಢ್ಯತೆ ಎಂಬ ವಿಷಯದಲ್ಲಿ ಅ ಇಬ್ರಾಹಿಂ ಸಖಾಫಿ ಪುಝಕಾಟಿರಿ, ಱಅಶ್ ಅರಿಗಳು ಮತ್ತು ಮಾತುರೀದಿಗಳುೞ ಎಂಬ ವಿಷಯದಲ್ಲಿ ಮುಹಿಯುದ್ದೀನ್ ಕಾಮಿಲ್ ಸಖಾಫಿ ತೋಕೆ, ಱಬೋಧನೆಯ ಹೊಸ ಆಯಾಮಗಳುೞ ಎಂಬ ವಿಷಯದಲ್ಲಿ ಶಾಫಿ ಸಖಾಫಿ ಮುಂಡಾಂಬ್ರ ತರಗತಿ ನಡೆಸಲಿದ್ದಾರೆ.
ಮಧ್ಯಾಹ್ನ 2ಕ್ಕೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್ ವಹಿಸಲಿದ್ದಾರೆ. ಅಸ್ಸಯ್ಯಿದ್ ಸಾದಾತ್ ತಂಳ್ ಉಳ್ತೂರು ದುಆಗೈಯಲಿದ್ದಾರೆ. ಅಸ್ಸಯ್ಯಿದ್ ಆಟ್ಟಕ್ಕೋಯ ತಂಳ್ ಕುಂಬೋಳ್ ಉದ್ಘಾಟಿಸಲಿದ್ದಾರೆ. ಅಸ್ಸಯ್ಯಿದ್ ಖಲೀಲುಲ್ ಬುಖಾರಿ ತಂಳ್ ಕಡಲುಂಡಿ ಮುಖ್ಯ ಭಾಷಣಗೈಯ ಲಿದ್ದಾರೆ. ಹುಸೈನ್ ಸಅದಿ ಕೆ.ಸಿ. ರೋಡು, ಅಬೂ ಸುಫ್ಯಾನ್ ಇಬ್ರಾಹಿಂ ಮದನಿ, ಅಬ್ದುರ‌್ರಶೀದ್ ಝೈನಿ, ಶಾಫಿ ಸಅದಿ ಬೆಂಗಳೂರು ಮಾತನಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.