×
Ad

ಜೂ,18: ಭಾರತೀಯ ಮಾಧ್ಯಮದಲ್ಲಿ ಜಾತಿ ಮತ್ತು ಕಾರ್ಪೊರೇಟ್ ಏಕಸ್ವಾಮ್ಯದ ಕುರಿತು ವಿಶೇಷ ಉಪನ್ಯಾಸ

Update: 2025-06-17 19:08 IST

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವತಿಯಿಂದ ವಿಜ್ಞಾನ ಬ್ಲಾಕ್ ನ ಯು.ಆರ್. ರಾವ್ ಸಭಾಂಗಣದಲ್ಲಿ ಜೂ.18,ಅಪರಾಹ್ನ 2ಗಂಟೆಗೆ ಭಾರತೀಯ ಮಾಧ್ಯಮದಲ್ಲಿ ಜಾತಿ ಮತ್ತು ಕಾರ್ಪೊರೇಟ್ ಏಕಸ್ವಾಮ್ಯದ ಕುರಿತು ಖ್ಯಾತ ಪತ್ರಕರ್ತ ಮತ್ತು ಚಿಂತಕ ಶಿವ ಸುಂದರ್ ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ. ಎಲ್.ಧರ್ಮ ಅಧ್ಯಕ್ಷತೆ ವಹಿಸುತ್ತಾರೆ,ಕುಲಸಚಿವ ಕೆ.ರಾಜು ಮೊಗವೀರ ಭಾಗವಹಿಸಲಿದ್ದಾರೆ ಎಂದು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಆಧ್ಯಕ್ಷ ಎಂ.ಪಿ. ಉಮೇಶ್ ಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News