ಫೆ.2-3: ಅಜ್ಜಿನಡ್ಕದಲ್ಲಿ ಧಾರ್ಮಿಕ ಪ್ರವಚನ
Update: 2024-01-31 20:48 IST
ಮಂಗಳೂರು: ಅಜ್ಜಿನಡ್ಕದ ಬದ್ರಿಯಾ ಜುಮಾ ಮಸ್ಜಿದ್‌ನ ದ್ಸಿಕ್ರ್ ಹಲ್ಕಾ ಮತ್ತು ಸ್ವಲಾತ್‌ನ 18ನೇ ವಾರ್ಷಿಕ ಪ್ರಯುಕ್ತ ಫೆ.2,3ರಂದು ರಾತ್ರಿ 7:30ರಿಂದ ಧಾರ್ಮಿಕ ಪ್ರವಚನ ನಡೆಯಲಿದೆ.
ಫೆ.2ರಂದು ಅಸೈಯ್ಯದ್ ಆಮೀರ್ ತಂಳ್ ಅಲ್‌ಬುಖಾರಿ ಕಿನ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಬ್ಬಾರ್ ಸಖಾಫಿ ಪಾತೂರು ಪ್ರವಚನ ನೀಡುವರು. ಫೆ.3ರಂದು ಅಸೈಯ್ಯದ್ ಅಬ್ದುರ‌್ರಹ್ಮಾನ್ ಶಹೀರ್ ಅಲ್ ಬುಖಾರಿ ತಂಳ್ ಮಲ್ಹರ್ ನೇತೃತ್ವದಲ್ಲಿ ದ್ಸಿಕ್ರ್ ಹಲ್ಕಾ ಸ್ವಲಾತ್ ಮಜ್ಲಿಸ್ ನಡೆಯಲಿದೆ. ಅಬ್ದುರ‌್ರಝಾಕ್ ಅಬ್ರಾರಿ ಪಟ್ಟಣಂತಿಟ್ಟ ಪ್ರವಚನ ನೀಡುವರು ಎಂದು ಪ್ರಕಟನೆ ತಿಳಿಸಿದೆ.