×
Ad

2024ರ ಈ ಹೊತ್ತಿಗೆ ಕಥಾ-ಕಾವ್ಯ ಪ್ರಶಸ್ತಿ ಪ್ರಕಟ: ಸದಾಶಿವ ಸೊರಟೂರಿಗೆ ಕಥಾ ಪ್ರಶಸ್ತಿ, ನಿಝಾಮ್ ಗೋಳಿಪಡ್ಪುಗೆ ಕಾವ್ಯ ಪ್ರಶಸ್ತಿ

Update: 2024-01-18 17:18 IST

ಬೆಂಗಳೂರು: 2024ರ ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ಗೆ ದಾವಣಗೆರೆ ಜಿಲ್ಲೆಯ ಸೊರಟೂರಿನ ಸದಾಶಿವ ಸೊರಟೂರು ಅವರ ಅಪ್ರಕಟಿತ ಕಥಾಸಂಕಲನ, ‘ಧ್ಯಾನಕ್ಕೆ ಕೂತ ನದಿ’ ಆಯ್ಕೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸಜೀಪನಡು ಗ್ರಾಮದ ನಿಝಾಮ್ ಗೋಳಿಪಡ್ಪು ಅವರ ‘ಅ️ನಾಮಧೇಯ ಗೀರುಗಳು’ ಅಪ್ರಕಟಿತ ಕವನ ಸಂಕಲನವು ‘ಈ ಹೊತ್ತಿಗೆ ಕಾವ್ಯ ಪ್ರಶಸ್ತಿ’ ಪಡೆದುಕೊಂಡಿವೆ ಎಂದು ಪ್ರಕಟನೆ ತಿಳಿಸಿದೆ.

ಎರಡೂ ಪ್ರಶಸ್ತಿಗಳು ತಲಾ ರೂ. 10,000 ನಗದು ಹಾಗು ಪ್ರಶಸ್ತಿ ಫಲಕವನ್ನೊಳಗೊಂಡಿವೆ. ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ವಿಜೇತರಾದ ಸದಾಶಿವ ಸೊರಟೂರು ಅವರು ಪ್ರಸ್ತುತ ಹೊನ್ನಾಳಿಯಲ್ಲಿ ವಾಸವಾಗಿದ್ದಾರೆ. ‘ಅರ್ಧ ಮಳೆ ಅರ್ಧ ಬಿಸಿಲು’ ಇವರ ಮೊದಲ ಕಥಾ ಸಂಕಲನ. ‘ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ’, ‘ಗಾಯಗೊಂಡ ಸಾಲುಗಳು’ ಇವರ ಕವನ ಸಂಕಲನಗಳು.

ನಾಡಿನ ಖ್ಯಾತ ಕತೆಗಾರರು, ಪತ್ರಕರ್ತರೂ ಆಗಿರುವ ದೇವು ಪತ್ತಾರ್ ಅವರು ಈ ಬಾರಿಯ ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ವಿಭಾಗದ ತೀರ್ಪುಗಾರರಾಗಿದ್ದರು.

‘ಈ ಹೊತ್ತಿಗೆ ಕಾವ್ಯ ಪ್ರಶಸ್ತಿ’ ವಿಜೇತರಾದ ನಿಝಾಮ್ ಗೋಳಿಪಡ್ಪು ಅವರು ದ.ಕ.ಜಿಲ್ಲೆಯ ಸಜೀಪನಡು ಗ್ರಾಮದವರು. ಅವಿಜ್ಞಾನಿ ಹೆಸರಲ್ಲಿ ಕವನಗಳನ್ನು ರಚಿಸಿರುವ ನಿಝಾಮ್ ಗೋಳಿಪಡ್ಪುಅವರು ಪದವಿಪೂರ್ವದವರೆಗೆ ಶಿಕ್ಷಣಪಡೆದಿದ್ದಾರೆ. ‘ಅನಾಮಧೇಯ ಗೀರುಗಳು’ ಇವರ ಪ್ರಥಮ ಕೃತಿಯಾಗಿದೆ.

ನಾಡಿನ ಖ್ಯಾತ ಕವಿ, ಪ್ರತಿಭಾ ನಂದಕುಮಾರ್ ಅವರು ಈ ಹೊತ್ತಿಗೆಯ ಕಾವ್ಯ ಪ್ರಶಸ್ತಿಯ ತೀರ್ಪುರಗಾರರಾಗಿದ್ದರು.

ಪೂರ್ವ ಆಯ್ಕೆ ಸಮಿತಿ:

ಕಾವ್ಯ ವಿಭಾಗದಲ್ಲಿ, ಸಿಂಧು ರಾವ್ ಮತ್ತು ರೇಣುಕಾ ಕೊಡಗುಂಟಿ ಹಾಗೂ ಕಥಾ ವಿಭಾಗದಲ್ಲಿ, ಆನಂದ ಕುಂಚನೂರ್ ಮತ್ತು ಮಧು ವೈ.ಎನ್. ಅವರು ಮೊದಲ ಸುತ್ತಿನಲ್ಲಿ ತಲಾ 11 ಮತ್ತು 10 ಉತ್ತಮ ಸಂಕಲನಗಳು ಆಯ್ಕೆ ಮಾಡಿದ್ದರು.

ಮಾರ್ಚ್‌ನಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಈ ಹೊತ್ತಿಗೆಯ ಹೊನಲು ಕಾರ್ಯಕ್ರಮದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News