×
Ad

2024-25ನೆ ಸಾಲಿನ ಅಬ್ಬಕ್ಕ ಪ್ರಶಸ್ತಿಗೆ ಕ್ಯಾಥರಿನ್ ರೊಡ್ರಿಗಸ್, ಸುಹಾಸಿನಿ ದಾಮೋದರ್ ಆಯ್ಕೆ

Update: 2025-02-05 22:06 IST

ಮಂಗಳೂರು: 2024-25 ನೆ ಸಾಲಿನ ಅಬ್ಬಕ್ಕ ಪ್ರಶಸ್ತಿಗೆ ಕ್ಯಾಥರಿನ್ ರೊಡ್ ರಿಗಸ್, ಸುಹಾಸಿನಿ ದಾಮೋದರ್ ಆಯ್ಕೆ ಯಾಗಿದ್ದಾರೆ ಎಂದು ಉಳ್ಳಾಲದ ವೀರರಾಣಿ ಅಬ್ಬಕ್ಜ ಸಮಿತಿಯ ಅಧ್ಯಕ್ಷ ದಿನಕರ ಉಳ್ಳಾಲ್ ಸುದ್ದಿಗೋಷ್ಠಿ ಯಲ್ಲಿಂದು ತಿಳಿಸಿದ್ದಾರೆ.

ಸಾಹಿತಿ ಕ್ಯಾಥರಿನ್ ಮಡಿಗರ್ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಟಪಾಡಿ ಗ್ರಾಮದ ಕ್ಯಾಥರಿನ್ ರೊಡ್ರಿಗಸ್‌ರವರು ಸಾಹಿತ್ಯ ಕ್ಷೇತ್ರದ ಬಹುಮುಖ ಪ್ರತಿಭೆ ಮತ್ತು ಕನ್ನಡ, ತುಳು, ಕೊಂಕಣಿಯಲ್ಲಿ ಕಥೆ, ಕವನ, ಕಾದಂಬರಿ, ಪ್ರಬಂಧ, ನಾಟಕ ಗಳ ಬಹುಮುಖ ಪ್ರತಿಭೆಯ ಕರಾವಳಿಯ ಸಾಹಿತಿಗಳಲ್ಲೊಬ್ಬರಾಗಿದ್ದಾರೆ.

11 ಕೊಂಕಣಿ ನಾಟಕಗಳನ್ನು, 8 ಕನ್ನಡ ನಾಟಕಗಳನ್ನು ರಚಿಸಿದ್ದಾರೆ. ಕ್ಯಾಥರಿನ್ ರೊಡ್ರಿಗ‌ರವರ ನಾಟಕಗಳ ಸತ್ವವನ್ನು ತಿಳಿಸುತ್ತದೆ. ಅನುವಾದ ಸಾಹಿತ್ಯ ರಚನೆಯಲ್ಲಿಯೂ ಇವರು ಮುಂಚೂಣಿಯಲ್ಲಿದ್ದು,ಸಾರ್ವಜನಿಕ ಕ್ಷೇತ್ರದಲ್ಲಿ ಕ್ಯಾಥರಿನ್ ಪೊಡ್ರಿಗಸ್‌ರವರ ಕೊಡುಗೆ ಮಹತ್ವದ್ದಾಗಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯೆ, ಕರಾವಳಿ ಪ್ರಾಧಿಕಾರದ ಸದಸ್ಯೆ, ಸ್ಥಳೀಯ ಸೈಂಟ್ ವಿನ್ಸೆಂಟ್ ಡಿ ಪಾನ್ಸ್ ಚರ್ಚ್‌ನ ಸದಸ್ಯೆಯಾಗಿ ಕಾರ್ಯ ನಿರ್ವಹಿಸಿ ಮೆಚ್ಚುಗೆಗೆ ಪಾತ್ರರಾಗಿ ದ್ದಾರೆ. ಸಂದೇಶ ಸಮಗ್ರ ಸಾಹಿತ್ಯ ಪುರಸ್ಕಾರ. ಸಂದೇಶ ತುಳು ಸಾಹಿತ್ಯ ಪುರಸ್ಕಾರ.ಎಮ್.ಸಿ.ಎ. ದೊಹಾ ಖತಾರ್ ಕಲಾ ಪುರಸ್ಕಾರ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಪುರಸ್ಕಾರ, ಬಹರೈನ್ ವಶಮಾನೋತ್ಸವ ಕಥಾ ಪುಸ್ಕಾರ. ಕೊಂಕಣಿ ಸಾಹಿತ್ಯ ಪರಿಷತ್ ಮುಂಬಯ್ ಏಕಾಂಕ ನಾಟಕ ಪುರಸ್ಕಾರ, 10 ವರ್ಷ ಧರ್ಮಸ್ಥಳ ದಿ. ರತ್ನವರ್ಮ ಹೆಗ್ಗಡೆ ಸ್ಮಾರಕ ತುಳು ನಾಟಕ ಪುರಸ್ಕಾರ.ದಿ. ಕಲ್ಪನಾ ತುಳು ನಾಟಕ ರಚನಾ ಪ್ರಶಸ್ತಿ.ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಆಮೋಘ ಸೇವೆಯನ್ನು ಪರಿಗಣಿಸಿ 2024-2025ನೇ ಸಾಲಿನ 'ವೀರರಾಣಿ ಅಬ್ಬಕ್ಕ ಪ್ರಶಸ್ತಿ' ಗೆ ಕ್ಯಾಥರಿನ್ ರೊಡ್ರಿಗಸ್‌ ರವರನ್ನು ಪ್ರಶಸ್ತಿ ಆಯ್ಕೆ ಸಮಿತಿಯು ಆಯ್ಕೆ ಮಾಡಿದೆ.

*ಸುವಾಸಿನಿ ದಾಮೋದರ್:-2024-2025ನೇ ಸಾಲಿನ 'ವೀರರಾಣಿ ಅಬ್ಬಕ್ಕ ಪ್ರಶಸ್ತಿ' (ಸಮಾಜ ಸೇವೆ)ಗೆ ಆಯ್ಕೆಯಾ ಗಿರುವವರು ಹಿರಿಯ ಸಮಾಜ ಸೇವಕಿ - ಸುವಾಸಿನಿ ದಾಮೋದರ್. ಉಳ್ಳಾಲ ಪೆರ್ಮನ್ನೂರು ಗ್ರಾಮದ ಬಬ್ಬುಕಟ್ಟೆ ನಿವಾಸಿಯಾದ ಸುವಾಸಿನಿಯವರು ದಾಮೋದರ್‌ರವರ ಪತ್ನಿ. ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸುವಾಸಿನಿ ದಾಮೋದರ್‌ರವರು 80ರ ಇಳಿ ವಯಸ್ಸಿನಲ್ಲಿಯೂ ಇತರರ ಸೇವೆಗಾಗಿ ಕಾಳಜಿಯನ್ನು ಹೊಂದಿದ್ದಾರೆ.

ಮಂಗಳೂರಿನ ಡೀಡ್ಸ್ ಸಂಸ್ಥೆಯ ಕಾರ್ಯದರ್ಶಿ, ದ.ಕ. ಮಹಿಳಾ ವೇದಿಕೆಯ ಉಪಾಧ್ಯಕ್ಷೆ, ಸಾಕ್ಷರತಾ ಮಹಿಳಾ ವೇದಿ ಕೆಯ ಅಧ್ಯಕ್ಷೆ, ದ.ಕ. ಜಿಲ್ಲಾ ಪರಿಸರಾಸಕ್ತ ಒಕ್ಕೂಟದ ಉಪಾಧ್ಯಕ್ಷೆ, ಆದರ್ಶ ಮಹಿಳಾ ಮಂಡಲದ ಅಧ್ಯಕ್ಷೆ, ಪೆರ್ಮನ್ನೂರು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ, ಲಯನ್ಸ್ ಕ್ಲಬ್ ಚೋಟಾ ಮಂಗಳೂರು ಇದರ ಮಾಜಿ ಅಧ್ಯಕ್ಷೆ, ತಾಲೂಕು ಮಹಿಳಾ ಮಂಡಲಗಳ ಉಕ್ಕೂಟದ ಉಪಾಧ್ಯಕ್ಷೆ, ಪೆರ್ಮನ್ನೂರು ಮಹಿಳಾ ಆರೋಗ್ಯ ಸಂಘದ ಅಧ್ಯಕ್ಷೆ, ಅನೇಕ ಬಡ ಹೆಣ್ಣು ಮಕ್ಕಳಿಗೆ ಉದ್ಯೋಗ ಕೊಡಿಸಿರುವುದು, ಟೈಲರಿಂಗ್ ತರಬೇತಿ, ಟೈಲರಿಂಗ್ ಮಿಷನ್‌ಗಳನ್ನು ಕೊಡಿಸಿರುವುದು, ಇಲೆಕ್ಟ್ರಾನಿಕ್ಸ್ ದುರಸ್ತಿಗಳ ತರಬೇತಿ ವ್ಯವಸ್ಥೆ – ಈ ಮೂಲಕ ಯುವಜನರು ಸ್ವಾವಲಂಬಿಗಳಾಗಲು ಸಹಾಯ ಮಾಡಿರುವುದು ಸಾಧನೆಯಾಗಿದೆ.

*ಸುವಾಸಿನಿ ದಾಮೋದರ್‌ರವರನ್ನು ಕಂಕನಾಡಿ ಕೇಟರರ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್, ಲಯನ್ಸ್ ಲಯನೆಸ್ ಕ್ಲಬ್ ಚೋಟಾ ಮಂಗಳೂರು, ಕಾವೇರಿ ಲಯನ್ಸ್ ಕ್ಲಬ್, ಮಂಗಳೂರು, ರೋಟರಿ ಕ್ಲಬ್ ದೇರಳಕಟ್ಟೆ, ಗುರು ಸೇವಾ ಬಳಗ ಒಡಿಯೂರು, ದ.ಕ. ಭಾರತೀಯ ತೀಯಾ ಸಮಾಜ ಜಪ್ಪು, ತೀಯಾ ಸಮಾಜ ಉಡುಪಿ, ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಘಟಕ, ಜೆ.ಸಿ.ಐ ಕೊಣಾಜೆ - ಮುಂತಾದ ಸಂಸ್ಥೆಗಳು ಪುರಸ್ಕರಿಸಿವೆ.ಸಮಾಜಸೇವಾ ಕ್ಷೇತ್ರದಲ್ಲಿ ಸಲ್ಲಿಸಿರುವ ಅಮೋಘ ಸೇವೆಯನ್ನು ಪರಿಗಣಿಸಿ 2024-2025ನೇ ಸಾಲಿನ 'ವೀರರಾಣಿ ಅಬ್ಬಕ್ಕ ಸೇವಾ ಪುರಸ್ಕಾರ' ಕ್ಕೆ ಸುವಾಸಿನಿ ದಾಮೋದ‌ರವರನ್ನು ಪ್ರಶಸ್ತಿ ಆಯ್ಕೆ ಸಮಿತಿಯು ಆಯ್ಕೆಮಾಡಿದೆ ಎಂದು ಸಮಿತಿಯ ಅಧ್ಯಕ್ಷ ದಿನಕರ ಉಳ್ಳಾಲ್ ತಿಳಿಸಿದ್ದಾರೆ.

ಸುದ್ದಿ ಗೋಷ್ಠಿಯಲ್ಲಿ ಉಳ್ಳಾಲ ವೀರರಾಣಿ ಅಬ್ಬಕ್ಕ ಸಮಿತಿಯ ಗೌರವಾಧ್ಯಕ್ಷ ಜಯರಾಮ ಶೆಟ್ಟಿ,ಉಪಾಧ್ಯಕ್ಷ ಸದಾನಂದ ಬಂಗೇರ, ಅಲಿಯಬ್ಬ,ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮೀ ಗಟ್ಟಿ,ಪದಾಧಿಕಾರಿಗಳಾದ ರತ್ನಾವತಿ ಬೈಕಾಡಿ,ಶಶಿಕಾಂತಿ ಬಂಗೇರ ಮೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News