×
Ad

ಫೆ.21ರಿಂದ ಎಮ್ಮೆಮ್ಮಾಡ್ ಮಖಾಂ ಉರೂಸ್

Update: 2025-02-20 19:44 IST

ಮಂಗಳೂರು, ಫೆ.20: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಎಮ್ಮೆಮಾಡು ಗ್ರಾಮದಲ್ಲಿ ಅಂತ್ಯ ವಿಶ್ರಾಂತಿ ಹೊಂದಿರುವ ಹಜ್ರತ್ ಸೂಫಿ ಶಹೀದ್ ವಲಿಯುಲ್ಲಾಹಿ ಮತ್ತು ಹಜ್ರತ್ ಸೈಯದ್ ಹಸನ್ ಸಕಾಫ್ ಹಾಗೂ ಇನ್ನಿತರ ಪ್ರಮುಖ ಮಹಾತ್ಮರುಗಳ ಹೆಸರಿನಲ್ಲಿ ಪ್ರತಿ ವರ್ಷ ನಡೆಸುವ ಉರೂಸ್ ಕಾರ್ಯಕ್ರಮವು ಫೆ.21ರಿಂದ 28ರ ತನಕ ನಡೆಯಲಿದೆ.

ಫೆ.21ರಂದು ಮಖಾಂ ಝಿಯಾರತ್, ಸಾಮೂಹಿಕ ವಿವಾಹ ಕಾರ್ಯಕ್ರಮ, ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಸಖಾಫಿ ಅವರಿಂದ ಧ್ವಜಾರೋಹಣ ನೆರವೇರಿಸುವುದರೊಂದಿಗೆ ಪ್ರಾರಂಭಗೊಳ್ಳಲಿದೆ. ಸೈಯ್ಯದ್ ಜಿಫ್ರಿ ಮುತ್ತು ಕೋಯ ತಂಳ್ ನೇತೃತ್ವ ವಹಿಸುವರು. ಹಾಫಿಝ್ ಅಬ್ದುಲ್ ರಾಝಿಕ್ ಫೈಝಿ ಪ್ರವಚನ ನೀಡಲಿದ್ದಾರೆ.

ಫೆ.22ರಂದು ಸಯ್ಯಿದ್ ಝೈನುದ್ದೀನ್ ಅಲ್‌ಬುಖಾರಿ ಲಕ್ಷದ್ವೀಪ ಅವರ ನೇತೃತ್ವದಲ್ಲಿ ದ್ಸಿಕ್ರ್ ಹಲ್ಕ ನಡೆಯಲಿದೆ. ಉಸ್ಮಾನ್ ಜೌಹರಿ ನೆಲ್ಯಾಡಿ ಪ್ರವಚನ ನೀಡಲಿದ್ದಾರೆ. ಫೆ.23ಕ್ಕೆ ಸಯ್ಯಿದ್ ಸಲೀಂ ಅಲ್‌ಬುಖಾರಿ ತಂಙಳ್ ನೇತೃತ್ವದಲ್ಲಿ ಖತಂ ದುಆ ನಡೆಯಲಿದೆ. ಸಯ್ಯಿದ್ ವಿ.ಪಿ. ಅಬ್ದುಲ್ ರಹಿಮಾನ್ ದಾರಿಮಿ ಆಟೀರಿ ತಂಙಳ್ ಪ್ರವಚನ ನೀಡಲಿದ್ದಾರೆ. ಫೆ.24ರಂದು ಸಾರ್ವಜನಿಕ ಸಮ್ಮೇಳನ ನಡೆಯಲಿದ್ದು, ಸಯ್ಯಿದ್ ಮುಈನ್ ಅಲಿ ದಿಹಾಬ್ ತಂಙಳ್, ಸಯ್ಯಿದ್ ಶಿಹಾಬುದ್ದೀನ್ ಅಲ್‌ಹೈದ್ರೋಸಿ ಕಿಲ್ಲೂರು ತಂಙಳ್ ಡಾ.ಎ.ಪಿ. ಅಬ್ದುಲ್ ಹಕೀಂ ಅಝ್ಹರಿ, ಮೌಲಾನ ಶಾಫಿ ಸಅದಿ ಬೆಂಗಳೂರು, ಸೈಯದ್ ಇಸ್ಹಾಕ್ ಲತೀಫ್ ಅಲ್ ಹೈದ್ರೋಸಿ, ಶಫೀಕ್ ಬದ್ರಿ ಕಡಕ್ಕಲ್, ಸ್ಪೀಕರ್ ಯು.ಟಿ. ಖಾದರ್, ಸಚಿವರಾದ ಬಿಝೆಡ್ ಝಮೀರ್ ಅಹ್ಮದ್, ಪ್ರಿಯಾಂಕ ಖರ್ಗೆ, ಎನ್.ಎಸ್. ಬೋಸರಾಜ್, ಎ. ಪೊನ್ನಣ್ಣ, ಮಂತರ್‌ಗೌಡ, ಎಸ್.ಆರ್. ಮೆಹರೋಝ್ ಖಾನ್ ಭಾಗವಹಿಲಿದ್ದಾರೆ.

ಫೆ.25ರಂದು ಸಯ್ಯಿದ್ ಕಾತಿಂ ಸಖಾಫಿ ಅಲ್‌ಹೈದ್ರೋಸಿ ಎಮ್ಮೆಮ್ಮಾಡ್, ನೌಫಲ್ ಸಖಾಫಿ ಕಳಸ ಪ್ರವಚನ ನೀಡಲಿ ದ್ದಾರೆ. ಫೆ.26ರಂದು ದುಆ ಮಜ್ಲಿಸ್‌ನ ನೇತೃತ್ವವನ್ನು ಅಸ್ಸೆಯ್ಯಿದ್ ಅಬ್ದುರ‌್ರಹ್ಮಾನ್ ಮಸ್‌ಹೂದ್ ತಂಙಳ್ ಕೂರತ್ ವಹಿಸಲಿದ್ದಾರೆ. ಸಯ್ಯಿದುದ್ದೀನ್ ಶರಪುದ್ದೀನ್ ಇಮಮಿ ಅಲ್‌ಹೈದ್ರೋಸಿ ಎಮ್ಮೆಮ್ಮಾಡ್, ಮಸೂದ್ ಸಖಾಫಿ ಗೂಡಲ್ಲೂರು ಪ್ರವಚನ ನೀಡುವರು. ಫೆ.27ರಂದು ಹಸನ್ ಸಖಾಫಿ ಮಲಪ್ಪುರಂ ನೇತೃತ್ವದಲ್ಲಿ ಸಯ್ಯಿದ್ ಸಮೀಹ್ ಅನ್ವರಿ ಅಲ್‌ಅಹ್ಸನಿ ಎಮ್ಮೆಮ್ಮಾಡ್ ದುಆಗೈಯುವರು. ಮುನೀರ್ ಹುದವಿ ವಿಲಹಿಲ್ ಪ್ರವಚನ ನೀಡುವರು. ಫೆ.28ರಂದು ನಡೆಯುವ ಸಮಾರೋಪ ಸಮಾರಂಭವನ್ನು ಸಯ್ಯಿದ್ ಇಲ್ಯಾಸ್ ಅಲ್ ಹೈದ್ರೋಸಿ ಎಮ್ಮೆಮ್ಮಾಡ್ ಉದ್ಘಾಟಿಸುವರು. ಹುಸೈನ್ ಸಅದಿ ಕೆಸಿ ರೋಡ್ ಮುಖ್ಯಭಾಷಣ ಮಾಡುವರು. ನೂರುಸ್ಸದಾತ್ ಸಯ್ಯಿದ್ ಅಬ್ದುರ‌್ರಹ್ಮಾನ್ ಇಂಬಿಚ್ಚಿಕೋಯ ಬಾಯಾರ್ ತಂಙಳ್ ಸಮಾರೋಪ ದುಆಗೈಯುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News