ಡಿ.24: ಕಸಬಾ ಬೆಂಗರೆಯಲ್ಲಿ ಜಾಮಿಅಃ ನೂರಿಯ್ಯಾ ಅರಬಿಯ್ಯಾದ ಪ್ರಚಾರ ಸಮ್ಮೇಳನ
ಮಂಗಳೂರು: ದ.ಕ.ಜಿಲ್ಲಾ ಸ್ಟೂಡೆಂಟ್ ಫಾರಂ ಹಾಗೂ ಎಸ್ಕೆಎಸೆಸ್ಸೆಫ್ ಬೆಂಗ್ರೆ ಹೆಡ್ ಶಾಖೆಯ ಜಂಟಿ ಆಶ್ರಯದಲ್ಲಿ ಜಾಮಿಅಃ ನೂರಿಯ್ಯಾ ಅರಬಿಯ್ಯಾ ಪಟ್ಟಿಕ್ಕಾಡ್ ಇದರ 61ನೇ ವಾರ್ಷಿಕ ಹಾಗೂ ೫೯ನೇ ಸನದುದಾನ ಮಹಾ ಸಮ್ಮೇಳನದ ಪ್ರಚಾರ ಸಮ್ಮೇಳನ ಹಾಗೂ ಇಷ್ಕ್ ಮಜ್ಲಿಸ್ ಕಾರ್ಯಕ್ರಮವು ಡಿ.24ರ ಮಗ್ರಿಬ್ ನಮಾಝಿನ ಬಳಿಕ ಕಸಬಾ ಬೆಂಗರೆಯಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್, ಸಮಸ್ತ ಕೇಂದ್ರ ಮಶಾವರ ಸದಸ್ಯರಾದ ಶೈಖುನಾ ಅಸ್ಗರಲಿ ಫೈಝಿ ಪಟ್ಟಿಕ್ಕಾಡ್, ಶೈಖುನಾ ಉಸ್ಮಾನ್ ಫೈಝಿ ತೋಡಾರ್, ಜಾಮಿಅಃ ನೂರಿಯಃ ಅರಬಿಯಃ ಇದರ ಪ್ರೊಫೆಸರ್‌ಗಳಾದ ಶೈಖುನಾ ಒ.ಟಿ ಮುಸ್ತಫಾ ಫೈಝಿ, ಶೈಖುನಾ ಲಿಯಾವುದ್ದೀನ್ ಫೈಝಿ, ಅಡ್ಡೂರು ಜುಮಾ ಮಸೀದಿ ಖತೀಬ್ ಸ್ವದಕತುಲ್ಲಾ ಫೈಝಿ, ತೋಡಾರಿನಲ್ಲಿರುವ ಶಂಸುಲ್ ಉಲಮಾ ಅರಬಿಕ್ ಕಾಲೇಜ್‌ನ ಪ್ರಾಂಶುಪಾಲ ರಫೀಕ್ ಹುದವಿ ಕೋಲಾರ್, ಬೆಂಗರೆಯ ಮುಹಿಯುದ್ದೀನ್ ಜುಮಾ ಮಸ್ಜಿದ್‌ನ ಖತೀಬ್ ಶರೀಫ್ ದಾರಿಮಿ ಭಾಗವಹಿಸಲಿದ್ದಾರೆ. ಸ್ವಾಲಿಹ್ ಫೈಝಿ ಬತ್ತೇರಿ ಮುಖ್ಯ ಪ್ರಭಾಷಣಗೆಯ್ಯಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.