×
Ad

ಅ.26ರಂದು ಕಣಚೂರು ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಕಾರ್ಯಾಗಾರ

Update: 2024-10-24 22:07 IST

ಉಳ್ಳಾಲ: ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಕ್ಕಳ ಚಿಕಿತ್ಸಾ ವಿಭಾಗದಿಂದ "ಶಿಶು ಗ್ಯಾಸ್ಟ್ರೋ ಎಂಟರೋಲಜಿಯ ನಿರಂತರ ವೈದ್ಯಕೀಯ ಶಿಕ್ಷಣ– 2024" ಕರಾವಳಿ ಶಿಶು ಗ್ಯಾಸ್ಟ್ರೋಎಂಟರೋಲಜಿಯ ಪ್ರಸ್ತುತ ಸ್ಥಿತಿಯ ಕುರಿತು ಒಂದು ದಿನದ ಕಾರ್ಯಗಾರವು ಅ. 26ರಂದು ಕಣಚೂರು ವೈದ್ಯಕೀಯ ಕಾಲೇಜಿನ ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಕಣಚೂರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಕ್ಕಳ ತಜ್ಞ ಹಾಗೂ ನವಜಾತ ಶಿಶು ಗ್ಯಾಸ್ಟ್ರೋ ಎಂಟರೋಲಜಿಸ್ಟ್ ಡಾ. ಗೌತಮ್ ಪೈ ತಿಳಿಸಿದರು.

ಗುರುವಾರದಂದು ತೊಕ್ಕೊಟ್ಟುವಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಈ ಕಾರ್ಯ ಕ್ರಮದ ನೇತೃತ್ವವನ್ನು ಕಣಚೂರು ವೈದ್ಯಕೀಯ ಸಂಸ್ಥೆಯ ಅಧ್ಯಕ್ಷರಾದ ಡಾ.ಯು.ಕೆ. ಮೋನು ಮತ್ತು ನಿರ್ದೇಶಕರಾದ ಅಬ್ದುರಹಿಮಾನ್ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಮಕ್ಕಳ ಕರುಳು ಮತ್ತು ವಿವಿಧ ರೀತಿಯ ಕಾಯಿಲೆಗೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ಚರ್ಚಿಸ ಲಾಗುತ್ತಿದ್ದು, ಶಿಶು ಗ್ಯಾಸ್ಟ್ರೋಎಂಟರೋಲಜಿಯ ಬಗ್ಗೆ ವೈದ್ಯಕೀಯ ಕ್ಷೇತ್ರದಲ್ಲಿರುವ ನಿರ್ಲಕ್ಷ್ಯತೆಯನ್ನು ಪರಿಹರಿಸುವ ಪ್ರಯತ್ನವನ್ನು ಕಾರ್ಯಗಾರದ ಮೂಲಕ ಮಾಡಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಪ್ರಮುಖ ವೈದ್ಯರು ಭಾಗವಹಿಸಲಿದ್ದು ಕ್ಯಾಲಿಕಟ್ ನ ಡಾ.ರಿಯಾಜ್ ,ಚೆನ್ನೈನ ಡಾ. ಸೋಮಶೇಖರ್ ,ಎಜೆ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ.ಬಿ.ಎಸ್.ಪ್ರಸಾದ್ ,ಕಣಚೂರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ. ಗೌತಮ್ ಪೈ,ಡಾ.ವಿಜಯ್ ಮಹಾನ್ತೇಶ ಮತ್ತು ಬೆಂಗಳೂರು ಅಪೋಲೊ ಆಸ್ಪತ್ರೆಯ ಡಾ.ಸಂದೀಪ್ ಸತ್ಸಂಗಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.

ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ವೈದ್ಯರುಗಳಿಗೆ ವಿಶೇಷ,ಮಹತ್ವದ ಕಾರ್ಯಗಾರ ಇದಾಗಿದ್ದು,ಶಿಶುಗಳಲ್ಲಿ ಹೆಪಟೈಟಿಸ್, ಯಕೃತ್ತಿನ ರೋಗಗಳು, ವಾಂತಿ, ಬ್ಲಾಕ್ ಆದ ಯಕೃತ್ ಮಾರ್ಗ, ಮತ್ತು ಲಿವರ್ ಟ್ರಾನ್ಸ್‌ಪ್ಲಾಂಟೇಶನ್ ಬಗ್ಗೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಸಂಶೋಧನೆಗಳ ಬಗ್ಗೆ ತಿಳಿಸಲಾಗುವುದು.

ಕಣಚೂರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಓನಿಲ್ ಫೆರ್ನಾಂಡಿಸ್, ಮಕ್ಕಳ ತಜ್ಞ ಡಾ.ಸಂಶಾದ್ ಎ.ಖಾನ್, ಸಹಾಯಕ ಪ್ರಾಧ್ಯಾಪಕ ರಾದ ಡಾ ನಜಾಹ್ ಅಬ್ದರ‍್ರೆಹೆಮಾನ್, ಸಹಾಯಕ ಪ್ರಾಧ್ಯಾಪಕರಾದ ಡಾ. ಅತುಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News