ಜ.31ರಿಂದ ಕುದ್ರೋಳಿ ಮಖಾಂ ಉರೂಸ್
Update: 2025-01-25 21:10 IST
ಮಂಗಳೂರು, ಜ.25: ಹಝ್ರತ್ ಸಯ್ಯಿದ್ ಖಾದಿರ್ ಶಾ ವಲಿಯುಲ್ಲಾಹಿ (ಖ.ಸಿ) ದರ್ಗಾ ಶರೀಫ್ ಕರ್ಬಲಾ ರೋಡ್ ಕುದ್ರೋಳಿ ಮಂಗಳೂರು ಪ್ರತೀ ಎರಡು ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುವ ಉರೂಸ್ ಜ. 31ರಿಂದ ಫೆ. 8ರ ತನಕ ನಡೆಯಲಿದೆ.
ಮೌಲಿದ್ ಹಾಗೂ ರಿಫಾಯೀ ರಾತೀಬ್,ಉದ್ಘಾಟನಾ ಸಮಾರಂಭ, ಧಾರ್ಮಿಕ ಉಪನ್ಯಾಸ, ಜಲಾಲಿಯ್ಯ ರಾತೀಬ್, ಬುರ್ಧಾ ಮಜ್ಲಿಸ್, ಸೌಹಾರ್ದ ಸಂಗಮ ಹಾಗೂ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಲಿದೆ ಎಂದು ದರ್ಗಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.