×
Ad

ಜ.31ರಂದು ಮೋಂಟುಗೋಳಿ ಮದ್ರಸ ಕಟ್ಟಡದ ಉದ್ಘಾಟನೆ

Update: 2025-01-30 18:35 IST

ಮಂಗಳೂರು, ಜ.30: ಕೈರಂಗಳದ ಮೋಂಟುಗೋಳಿ ಗೌಸಿಯಾ ಜುಮಾ ಮಸೀದಿ ಮತ್ತು ಮದ್ರಸ(ರಿ) ಸಮಿತಿಯ ವತಿಯಿಂದ ನಿರ್ಮಸಲಾದ ಮದ್ರಸದ ನೂತನ ಕಟ್ಟಡದ ಉದ್ಘಾಟನೆ ಮತ್ತು ಮತಪ್ರಭಾಷಣ ಕಾರ್ಯಕ್ರಮ ಜ.31ರಂದು ನಡೆಯಲಿದೆ.

ಸಾಯಂಕಾಲ ಅಸರ್ ನಮಾಝ್‌ನ ಬಳಿಕ ಮದ್ರಸದ ನೂತನ ಕಟ್ಟಡದ ಉದ್ಘಾಟನೆಯನ್ನು ಅಸ್ಸಯ್ಯಿದ್ ಅಥಾವುಲ್ಲಾ ತಂಳ್ ಉದ್ಯಾವರ ನೆರವೇರಿಸಲಿರುವರು.

ಮೋಂಟುಗೋಳಿ ಗೌಸಿಯಾ ಜುಮಾ ಮಸೀದಿ ಮತ್ತು ಮದ್ರಸ ಕಮಿಟಿಯ ಅಧ್ಯಕ್ಷ ಸುಲೈಮಾನ್ ಎಂ.ಎಸ್. ಸಮಾರಂಭದ ಅಧ್ಯಕ್ಷತೆ ವಹಿಸಲಿರುವರು.

ವಿಧಾನ ಸಭಾ ಸ್ಪೀಕರ್ ಯು.ಟಿ. ಖಾದರ್ , ಯೆನೆಪೋಯ ವಿವಿ ಕುಲಾಧಿಪತಿ ಹಾಜಿ ವೈ ಅಬ್ದುಲ್ ಕುಂಞಿ, ನ್ಯಾಶನಲ್ ಕಮಿಶನ್ ಫಾರ್ ಅಲೈಡ್ ಆ್ಯಂಡ್ ಹೆಲ್ತ್ ಕೇರ್ ಪ್ರೊಫೆಷನ್ಸ್ ಇದರ ರಾಜ್ಯಾಧ್ಯಕ್ಷ ಡಾ.ಯು.ಟಿ. ಇಫ್ತಿಕರ್ ಅಲಿ ಫರೀದ್, ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ. ಜಿಲ್ಲಾ ಉಪಾಧ್ಯಕ್ಷ ಹೈದರ್ ಪರ್ತಿಪ್ಪಾಡಿ, ಗ್ರೂಪ್ ಆಫ್ ಗಡಿಯಾರ್ ದುಬೈ ಇದರ ಆಡಳಿತ ನಿರ್ದೇಶಕ ಇಬ್ರಾಹೀಂ ಗಡಿಯಾರ್, ಇಂದಿರಾ ಹಾಸ್ಪಿಟಲ್ ಆಡಳಿತ ನಿರ್ದೇಶಕ ಡಾ. ನಿಝಾಮುದ್ದೀನ್, ಸದರ್ನ್ ರೈಲ್ವೇ ಮಂಡಳಿಯ ಸದಸ್ಯ ಅಹ್ಮದ್ ಬಾವಾ, ಕಾಸರಗೋಡಿನ ಉದ್ಯಮಿ ಮುಹಮ್ಮದ್ ಹಾಜಿ, ಅಜಿಲಮೊಗರು ಜುಮಾ ಮಸ್ಜಿದ್‌ನ ಅಧ್ಯಕ್ಷ ಪಿ.ಬಿ. ಅಬ್ದುಲ್ ಹಮೀದ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು.

ರಾತ್ರಿ ಇಶಾ ನಮಾಝ್‌ನ ಬಳಿಕ ಮತಪ್ರವಚನ ನಡೆಯಲಿದ್ದು, ಅಬ್ದುಲ್ ರಹ್ಮಾನ್ ಸಖಾಫಿ ಚಿಪ್ಪಾರ್ ಮುಖ್ಯ ಪ್ರವಚನ ನೀಡಲಿರುವರು. ಗೌಸಿಯಾ ಜುಮಾ ಮಸೀದಿಯ ಖತೀಬ್ ಅಬೂಬಕರ್ ಸಅದಿ ,ಮದ್ರಸದ ಸದರ್ ಮುಅಲ್ಲಿಂ ರಫೀಕ್ ಸಅದಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News