×
Ad

ವಿಕಲಚೇತನರ ಸೌಲಭ್ಯವನ್ನು ತಲುಪಿಸಿ : ನ್ಯಾ. ಜೈಬುನ್ನಿಸಾ

Update: 2025-12-08 20:19 IST

ಮಂಗಳೂರು:ವಿಕಲಚೇತನರಿಗಾಗಿ ಉಚಿತವಾಗಿ ಕಾನೂನು ನೆರವಿನ ಸೌಲಭ್ಯ ಒದಗಿಸಲಾಗಿದೆ. ಈ ಪ್ರಯೋಜನವನ್ನು ವಿಕಲಚೇತನರಿಗೆ ತಲುಪಿಸುವ ನಿಟ್ಟಿನಲ್ಲಿ ನಾಗರಿಕರು ಸ್ಪಂದಿಸಬೇಕು ಎಂದು ಜಿಲ್ಲಾ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಜೈಬುನ್ನಿಸಾ ಹೇಳಿದರು.

ನಗರದ ಕುಲಶೇಖರ ಕಲ್ಪನೆಯಲ್ಲಿ ಐಕ್ಯಂ ವಿಕಲಚೇತನರ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾದ ವಿಕಲಚೇತನರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿಕಲಚೇತನರಿಗೆ ಅನೇಕ ರೀತಿಯ ಸೌಲಭ್ಯಗಳನ್ನು ಸರಕಾರದಿಂದ ಒದಗಿಸಲಾಗುತ್ತಿದೆ. ಆ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳು ಶ್ರಮಿಸಬೇಕು ಎಂದು ಜೈಬುನ್ನಿಸಾ ಹೇಳಿದರು.

ಜಯಶ್ರೀ ಆಸ್ಪತ್ರೆಯ ಪುನರ್ವಸತಿ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಹರೀಶ್ ಎಸ್. ಕೃಷ್ಣ, ಮಂಗಳ ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲ ಡಾ. ಭರತ್ ಕೆ.ಎಚ್., ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ಚಂದ್ರಕಲಾ ಡಿ.ರಾವ್, ಡಾ. ಶೈಲಜಾ ಮಾತನಾಡಿದರು.

ಸಂಸ್ಥೆಯ ಗೌರವಾಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಪ್ರಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಸ್ಥಾಪಕ ಅಧ್ಯಕ್ಷೆ ಕಮಲಾಕ್ಷಿ ಕುಂದರ್ ಸ್ವಾಗತಿಸಿದರು. ಟ್ರಸ್ಟಿ ಸಂತೋಷ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News