×
Ad

ಜ.31 ರಿಂದ ಪೇರಡ್ಕ ಉರೂಸ್; ಫೆ.2ರಂದು ಸರ್ವಧರ್ಮ ಸಮ್ಮೇಳನ

Update: 2025-01-18 20:27 IST

ಸಂಪಾಜೆ:  ಗೂನಡ್ಕ ಪೇರಡ್ಕದ ಮೊಹಿಯುದ್ದೀನ್ ಜುಮ್ಮಾ ಮಸೀದಿ ಪೇರಡ್ಕದ ವಲಿಯುಲ್ಲಾಹಿ ದರ್ಗಾಶರೀಫ್ ಪೇರಡ್ಕದಲ್ಲಿ ಜ.31 ರಿಂದ ಫೆ.2 ರ ವರೆಗೆ ಉರೂಸ್ ಸಮಾರಂಭ ಹಾಗೂ ಫೆ.2 ರಂದು ಸರ್ವಧರ್ಮ ಸಮ್ಮೇಳನ ನಡೆಯಲಿದೆ.

ಮೊಹಿಯುದ್ದೀನ್ ಜುಮ್ಮಾ ಮಸೀದಿ ಪೇರಡ್ಕ ಇದರ ಅಧ್ಯಕ್ಷ ಟಿ.ಎಂ.ಶಹೀದ್ ಹಾಗೂ ಮೊಹಿಯುದ್ದೀನ್ ರಿಫಾಯಿ ದಫ್ ಅಸೋಸಿಯೇಷನ್ ಪೇರಡ್ಕ ಗೂನಡ್ಕ ಇದರ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ ರವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರಗಳನ್ನು ತಿಳಿಸಿದರು.

ಜ.31 ರಂದು ಜುಮ್ಮಾ ನಮಾಜಿನ ಬಳಿಕ ಧ್ವಜಾರೋಹಣ, ಮುಖಾಂ ಅಲಂಕಾರ ಮತ್ತು ಕೂಟ್ಟು ಪ್ರಾರ್ಥನೆ ನಡೆಯುವುದು. ರಾತ್ರಿ ಕಾರ್ಯಕ್ರಮದ ಉದ್ಘಾಟನೆ ನಡೆಯುವುದು. ಹಮೀದಲೀ ಶಿಹಾಬ್ ತಂಙಳ್ ಪಾಣಕ್ಕಾಡ್ ಉದ್ಘಾಟನೆ ನೆರವೇರಿಸುವರು. ಅಬ್ದುಲ್ ರಜಾಕ್ ಅಬ್ರಾರಿ ಪಟ್ಟನಂತಿಟ್ಟ ಧಾರ್ಮಿಕ ಪ್ರಭಾಷಣಗೈಯುವರು. ಟಿ.ಎಂ.ಶಹೀದ್ ಅಧ್ಯಕ್ಷತೆ ವಹಿಸುವರು.

ಫೆ.1 ರಂದು ರಾತ್ರಿ ರೌಲತುಲ್ ಉಲೂಂ ದಫ್ ಕಳಿ ಸಂಘಂ ಪೂವಲ್ ಕಾಸರಗೋಡು ಇವರಿಂದ ” ದಫ್ ಸ್ಪರ್ಧೆ, ಬುರ್ದಾ ಮಜ್ಲಿಸ್, ರಸೂಲ್ ಮದ್ ಹ್ ಗಾನಂ” ನಡೆಯುವುದು. ಮೂರನೇ ದಿನ ರಾತ್ರಿ ನಡೆಯುವ ಸೌಹಾರ್ದ ಸಮ್ಮೇಳನದ ಬಳಿಕ ಉರೂಸ್ ಸಮಾರೋಪ ಸಮಾರಂಭ ನಡೆಯುವುದು ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅಬ್ದುಲ್ ರಹಿಮಾನ್ ಮೊಟ್ಟೆಂಗಾರ್, ಪಿ.ಬಿ.ಹನೀಫ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News