×
Ad

ಕೌಶಲ್ಯ ಭರಿತ ಉನ್ನತ ಶಿಕ್ಷಣಕ್ಕೆ ಆದ್ಯತೆ: ಡಾ.ಎಂ.ಸಿ.ಸುಧಾಕರ್

Update: 2023-12-17 11:48 IST

ಮಂಗಳೂರು: ಉನ್ನತ ಶಿಕ್ಷಣದಲ್ಲಿ ಕೌಶಲ್ಯಗಳಿಗೆ ಒತ್ತುನೀಡುವ ಮೂಲಕ ಬದಲಾವಣೆಗೆ ಚಿಂತನೆ ಹೊಂದಿರುವುದಾಗಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದಾರೆ.

ಭಾರತೀಯ ದಂತ ವೈದ್ಯರ ಸಂಘಟನೆ ಯ ರಾಜ್ಯ ಮತ್ತು ಜಿಲ್ಲಾ ಘಟಕದ ಆಶ್ರಯ ದಲ್ಲಿ. ನಗರದ ಮರೀನಾ ಸಭಾಂಗ ಣದಲ್ಲಿ ಡಿ.15ರಿಂದ 17ರವರೆಗೆ ನಗರದಲ್ಲಿ ಹಮ್ಮಿಕೊಂಡಿದ್ದ 49ನೇ ಕರ್ನಾಟಕ ರಾಜ್ಯ ಹಾಗೂ 8ನೇ ಅಂತಾರಾಜ್ಯ 'ಡೆಂಟಲ್ ಕಾನ್ಫರೆನ್ಸ್' ಅನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ತಾನು ಸ್ವತಃ ದಂತ ವೈದ್ಯನಾಗಿದ್ದ ಈ ಅನುಭವ ಉನ್ನತ ಶಿಕ್ಷಣದ ಸಚಿವನಾದ ಬಳಿಕ ಸಹಾಯಕ್ಕೆ ಒದಗಿ ಬಂದಿದೆ. ಹಲವು ವೃತ್ತಿಪರ ಶಿಕ್ಷಣದಲ್ಲಿ ಕೌಶಲ್ಯಗಳಿಗೆ ಹೆಚ್ಚಿನ ಮಹತ್ವ ಇರುವ ರೀತಿಯಲ್ಲಿ ಉನ್ನತ ಶಿಕ್ಷಣದಲ್ಲೂ ವೃತ್ತಿಪರ ಕೌಶಲ್ಯಗಳ ಬೋಧನೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣದಲ್ಲಿ ಬದಲಾವಣೆ ತರುವ ಬಗ್ಗೆ ಚಿಂತನೆ ಇದೆ ಎಂದು ಸುಧಾಕರ್ ತಿಳಿಸಿದ್ದಾರೆ.

ಬೆಂಗಳೂರಿನ ದಂತ ಭವನದಲ್ಲಿ ದಂತ ವೈದ್ಯರಿಗೆ ತರಬೇತಿ ನೀಡುವುದು, ಉಚಿತ ದಂತ ಚಿಕಿತ್ಸೆ ನೀಡಲು ಪೂರಕವಾದ ವ್ಯವಸ್ಥೆಯನ್ನು ಜೋಡಿಸುವ ಮೂಲಕ ಮುಂಬೈ ಮಾದರಿಯ ದೇಶದ ಎರಡನೇ ದಂತ ಭವನವಾಗಿ ಅಭಿವೃದ್ಧಿಪಡಿಸಲು ನೆರವು ನೀಡುವುದಾಗಿ ಹೇಳಿದರು.

ಭಾರತೀಯ ದಂತ ವೈದ್ಯರ ಸಂಘಟನೆಯ ಸಕ್ರಿಯ ಸದಸ್ಯನಾಗಿದ್ದ ಸಂದರ್ಭವನ್ನು ಸಚಿವರು ನೆನಪಿಸಿಕೊಂಡರು.

ಸಮಾರಂಭದಲ್ಲಿ ಶಾಸಕ ಡಾ.ವೈ.ಭರತ್ ಶೆಟ್ಟಿ, ಭಾರತೀಯ ದಂತ ವೈದ್ಯರ ಸಂಘದ ಅಧ್ಯಕ್ಷ ರಾಜೀವ್ ಕುಮಾರ್ ಜೋ, ಗೌರವ ಮಹಾ ಪ್ರಧಾನ ಕಾರ್ಯದರ್ಶಿ ಡಾ.ಅಶೋಕ್ ದೊಗ್ಲೆ, ರಾಜ್ಯ ಘಟಕದ ಅಧ್ಯಕ್ಷ ರಾಮ ಮೂರ್ತಿ, ಸಂಘಟನಾ ಅಧ್ಯಕ್ಷ ಡಾ.ಶಿವಶರಣ್ ಶೆಟ್ಟಿ ಹಾಗೂ ಮಹೇಶ್ ಚಂದ್ರ, ಡಾ.ಭರತ್ ಸಿ.ವಿ., ಡಾ.ದಿಲೀಪ್ ನಾಯ್ಕ್, ಡಾ.ಕೃಷ್ಣ ನಾಯ್ಕ್, ಡಾ.ಅಶೋಕ್, ಪ್ರಸನ್ನಕುಮಾರ್ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಡಾ.ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ಡಾ.ಭರತ್ ಪ್ರಭು ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News