ನ.5: ಬಾರಗೆರೆ ಬರಂಬು ತುಳುವೆರೆ ಪುಂಚ ನಾಡೊಂದು ಕೃತಿ ಬಿಡುಗಡೆ
Update: 2025-11-01 19:23 IST
ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಪ್ರಕಟಿಸಿರುವ ಡಾ.ಇಂದಿರಾ ಹೆಗ್ಗಡೆ ಅವರು ಕ್ಷೇತ್ರ ಕಾರ್ಯ ಗಳ ಬಗ್ಗೆ ಬರೆದಿರುವ ’ಬಾರಗೆರೆ ಬರಂಬು ತುಳುವೆರೆ ಪುಂಚ ನಾಡೊಂದು’ ಕೃತಿ ಬಿಡುಗಡೆ ಕಾರ್ಯಕ್ರಮವು ನ.5ರ ಅಪರಾಹ್ನ 3ಕ್ಕೆ ನಗರದ ತುಳು ಭವನದಲ್ಲಿ ನಡೆಯಲಿದೆ.
ಕೃತಿಯನ್ನು ನಿವೃತ್ತ ಪ್ರಾಂಶುಪಾಲ ಡಾ.ಆಶಾಲತ ಸುವರ್ಣ ಬಿಡುಗಡೆ ಮಾಡಲಿದ್ದಾರೆ. ತುಳು ಅಕಾಡಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ವೈದ್ಯ ಡಾ. ಸಮೀರ್ ಮಾಡ, ಹಿರಿಯ ಲೇಖಕಿ ಪ್ರೇಮ ಅರ್ಜಿ ಕಾರ್ಕಳ, ಪ್ರಾಂಶುಪಾಲೆ ಡಾ. ಜ್ಯೋತಿ ಚೇಳಾಯಾರು, ಕೃಷ್ಣಮೂರ್ತಿ ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.