×
Ad

ಜು.6: ಲರ್ನ್ ದಿ ಕುರ್‌ಆನ್ ಪರೀಕ್ಷೆ

Update: 2025-07-05 18:12 IST

ಮಂಗಳೂರು, ಜು.5: ಎಸ್ಕೆಎಸ್ಸೆಂ, ಎಸ್‌ಇಬಿ, ಎಸ್‌ಜಿಎಂ, ಎಸ್ಕೆಎಸ್ಸೆಂ ಯೂತ್ ವಿಂಗ್, ಕೆಎಸ್‌ಎಫ್, ಎಂಜಿಎಂ ರಿಯಾದ್ ಇದರ ಸಹಯೋಗದಲ್ಲಿ ಆಯೋಜಿಸಲಾಗುವ ಲರ್ನ್ ದಿ ಕುರ್‌ಆನ್ 15ನೇ ಹಂತದ ಪರೀಕ್ಷೆಯು ಜು.6ರಂದು ಬೆಳಗ್ಗೆ 9:30ರಿಂದ ಪೂ. 11:30ರವರೆಗೆ 21 ಸೆಂಟರ್‌ಗಳಲ್ಲಿ ನಡೆಯಲಿದೆ.

12 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಪರೀಕ್ಷೆ ಬರೆಯುವ ಅವಕಾಶವಿದೆ. ಪ್ರಥಮ ಬಹುಮಾನ ಕನ್ನಡ ಮತ್ತು ಇಂಗ್ಲಿಷ್ ವಿಭಾಗಕ್ಕೆ ಉಮ್ರಾ ಟ್ರಿಪ್ಪ್, ದ್ವಿತೀಯ, ತೃತೀಯ ಹಾಗೂ ಇತರ ಬಹುಮಾನಗಳು 10 ಚಿನ್ನದ ನಾಣ್ಯಗಳಾಗಿರುತ್ತದೆ.

ಸಲಫಿ ಸೆಂಟರ್ ಕಂಕನಾಡಿ, ದಾರುಲ್ ಇಲ್ಮ್ ಮದ್ರಸ ಮುಲ್ಕಿ, ಮಸ್ಟಿದುಲ್ ಅಬ್ರಾರ್ ತಲಪಾಡಿ, ದಾರುಲ್ ಖೈರ್ ಮದ್ರಸ ಕುದ್ರೋಳಿ, ಸಿರಾತೇ ಮುಸ್ತಖೀಮ್ ಮದ್ರಸ ಚೊಕ್ಕಬೆಟ್ಟು, ದಾರುತ್ತಹೀದ್ ಮದ್ರಸ ಉಪ್ಪಿನಂಗಡಿ, ಇಸ್ಲಾಹೀ ಆಂಗ್ಲ ಮಾಧ್ಯಮ ಶಾಲೆ ಉಳ್ಳಾಲ, ಮರ್ಕಝ್ ಅಲ್ ಹುದಾ ಮದ್ರಸ, ಫರಂಗಿಪೇಟೆ, ಅಲ್ ಇಸ್ಲಾಹಿಯ್ಯ ಮದ್ರಸ ದೇರಳಕಟ್ಟೆ, ಮಿಫ್ತಾ ಉಲ್ ಉಲೂಮ್ ಮದ್ರಸ ಬಜಾಲ್ ಜಲ್ಲಿಗುಡ್ಡೆ, ಇಬ್ರಾಹೀಂ ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಕಾಪು ಉಚ್ಚಿಲ, ಜಾಮಿಯಃ ರಹ್ಮಾನಿಯಃ ಗುಂಡ್ಮಿ ಸಾಸ್ತಾನ, ಮಸ್ಟಿದ್ ಅತ್ತಕ್ಷಾ ಮೂಡುಗೋಪಾಡಿ, ಬಿಲ್ ವಾಲಿದೈನ್ ಮಸ್ಟಿದ್ ಕಲ್ಲಡ್ಕ, ದಾರು ತೌಹೀದ್ ಮದ್ರಸ ಸೂರಲ್ಪಾಡಿ, ಆಯಿಶಾ ಇಸ್ಲಾಮಿಕ್ ಸೆಂಟರ್ ಉಜಿರೆ, ಮಸ್ಟಿದ್ ಬಿಲಾಲ್ ಕುಂಜತ್ತಬೈಲ್, ಮಸ್ಟಿದುಲ್ ವದೂದ್ ವಿಜಯನಗರ ಪಡೀಲ್, ಮಸ್ಜಿದ್ ಆಯಿಶಾ ಸಿದ್ದೀಖ್ ಅಡ್ಡೂರು, ಮಸ್ಜಿದ್ ತೌಹೀದ್ ಅಡ್ಯಾರ್ ಕಣ್ಣೂರು, ಮಸ್ಜಿದ್ ಅಲ್ ಮನಾರ್ ಮಲಾರ್‌ಗಳಲ್ಲಿ ಪರೀಕ್ಷೆ ನಡೆಯಲಿದೆ ಮತ್ತು ಹಾಲ್ ಟಿಕೆಟ್ ಲಭ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News