×
Ad

ಫೆ.7ರಿಂದ ಹಿದಾಯತ್ ನಗರದಲ್ಲಿ ಸ್ವಲಾತ್ ವಾರ್ಷಿಕ

Update: 2024-02-05 21:35 IST

ಉಳ್ಳಾಲ: ಕೋಟೆಕಾರ್ ಹಿದಾಯತ್ ನಗರದ ಅಲ್ ಹಿದಾಯ ಜುಮಾ ಮಸ್ಜಿದ್‌ನಲ್ಲಿ ನಡೆಯುವ ಸ್ವಲಾತ್ ಮಜ್ಲಿಸ್‌ನ 24ನೇ ವಾರ್ಷಿಕೋತ್ಸವ ಹಾಗೂ ನೂತನ ಕಟ್ಟಡದ ಉದ್ಘಾಟನೆಯು ಫೆ.7ರಿಂದ ಮಸೀದಿಯ ಅಧ್ಯಕ್ಷ ಕೆಪಿ ಹುಸೈನ್ ಸಅದಿ ಕೆಸಿರೋಡ್ ಅವರ ಅಧ್ಯಕ್ಷತೆಯಲ್ಲಿ ಮಸೀದಿಯ ವಠಾರದಲ್ಲಿ ಜರುಗಲಿದೆ.

ಫೆ.7ರಂದು ಫಝಲ್ ಕೋಯಮ್ಮ ತಂಳ ಕೂರತ್ ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದು, ಮುನೀರ್ ಸಖಾಫಿ ಕೆಸಿರೋಡ್ ಸಭಾ ಕಾರ್ಯಕ್ರಮ ಉದ್ಘಾಟಿಸುವರು. ಮಸೀದಿ ಖತೀಬ್ ಅಬ್ದುಲ್ ಅಝೀಝ್ ಸಅದಿ ಅಲ್ ಅಫ್ಳಲಿ ಪ್ರವಚನ ನೀಡುವರು. ಫೆ.8ರಂದು ಅಶ್ರಫ್ ಸಅದಿ ಮಲ್ಲೂರು, ಫೆ.9ರಂದು ಕೆಪಿ ಹುಸೈನ್ ಸಅದಿ ಕೆಸಿ ರೋಡ್ ಪ್ರವಚನ ಮಾಡಲಿರು ವರು. ಸ್ಪೀಕರ್ ಯು.ಟಿ ಖಾದರ್ ಮತ್ತಿತರರು ಭಾಗವಹಿಸುವರು ಎಂದು ಮಸೀದಿ ಕಾರ್ಯದರ್ಶಿ ಸಿದ್ದೀಕ್ ಟಿಎಚ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News