×
Ad

ಪುತ್ತೂರು: ಊರಿಗೆ ಬಂದ ಕಾಡುಕೋಣ ಬಾವಿಗೆ ಬಿದ್ದು ಸಾವು

Update: 2023-08-19 13:39 IST

ಪುತ್ತೂರು: ಕಾಡುಕೋಣವೊಂದು ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಶನಿವಾರ ಬೆಳಗ್ಗೆ ಪುತ್ತೂರು ತಾಲೂಕಿನ ನರಿಮೊಗರು ಐಟಿಐ ಮೈದಾನದ ಪಕ್ಕದಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಪ್ರಕಾಶ್ ಎಂಬವರ ಜಾಗದಲ್ಲಿರುವ ಬಾವಿಯಲ್ಲಿ ಬೆಳಗ್ಗಿನ ಹೊತ್ತು ಕಾಡುಕೋಣವೊಂದು ಮೃತಪಟ್ಟಿರುವ ಸ್ಥಿತಿಯಲ್ಲಿ ಕಂಡು ಬಂದಿದೆ.

ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯವರು ಕ್ರೇನ್ ಮುಖಾಂತರ ಕಾಡುಕೋಣವನ್ನು ಬಾವಿಯಿಂದ ಮೇಲಕೆತ್ತಿದ್ದಾರೆ. ಮೃತಪಟ್ಟಿರುವ ಕಾಡುಕೋಣಕ್ಕೆ ಅಂದಾಜು 4 ರಿಂದ 5 ವರ್ಷ ಪ್ರಾಯವಾಗಿರಬಹುದು ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಸಿಎಫ್ ಸುಬ್ಬಯ್ಯ ನಾಯ್ಕ, ಆರ್ ಎಫ್ ಕಿರಣ್, ಡಿವೈಆರ್ ಎಫ್ ಕುಮಾರಸ್ವಾಮಿ ಹಾಗೂ ಪ್ರಸಾದ್ ಕೆ.ಜೆ, ಬೀಟ್ ಫಾರೆಸ್ಟ್ ಸತ್ಯನ್ ಡಿ.ಜಿ., ದೀಪಕ್, ಚಿದಾನಂದ, ಅರಣ್ಯ ವೀಕ್ಷಕ ಶೀನಪ್ಪ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಊರವರು ಸಹಕಾರ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News