×
Ad

ಉಳ್ಳಾಲ ದರ್ಗಾಕ್ಕೆ ಬಂದಿದ್ದ ಬೆಂಗಳೂರಿನ ವ್ಯಕ್ತಿ ಮೃತ್ಯು

Update: 2024-10-12 16:12 IST

ಸಾಂದರ್ಭಿಕ ಚಿತ್ರ

ಮಂಗಳೂರು, ಅ.12: ಉಳ್ಳಾಲದ ಸೈಯದ್ ಮದನಿ ದರ್ಗಾಕ್ಕೆ ಬಂದಿದ್ದ ಬೆಂಗಳೂರಿನ ನಯಮತುಲ್ಲಾ ಖಾನ್ (64) ಎಂಬವರು ಅಸೌಖ್ಯದಿಂದ ಮೃತಪಟ್ಟಿರುವ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅ.8ರಂದು ಉಳ್ಳಾಲಕ್ಕೆ ಬಂದಿದ್ದ ಇವರು ರಾತ್ರಿ ದರ್ಗಾ ವಠಾರದಲ್ಲೇ ತಂಗಿದ್ದರು. ಅ.9ರಂದು ಸಂಜೆ 4ಕ್ಕೆ ಆರೋಗ್ಯ ಸರಿಯಿಲ್ಲ ಎಂದಿದ್ದು, ತಕ್ಷಣ ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಅಂದು ರಾತ್ರಿ 10:37ಕ್ಕೆ ನಯಮತುಲ್ಲಾ ಖಾನ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಇವರ ಬಳಿಯಿದ್ದ ಆಧಾರ್ ಕಾರ್ಡ್ನಲ್ಲಿ ಬೆಂಗಳೂರಿನ ಗಂಗೊಡನಹಳ್ಳಿಯ ದೊಡ್ಡಬೀದರ ಕಲ್ಲು ಎಂಬ ವಿಳಾಸವಿದೆ. ಉಳಿದಂತೆ ಮನೆ ಅಥವಾ ಸಂಬಂಧಿಕರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ವಾರಸುದಾರರು ಇದ್ದಲ್ಲಿ ಉಳ್ಳಾಲ ಠಾಣೆಯ ಪೊಲೀಸ್ ಅಧಿಕಾರಿ (ಮೊ.ಸಂ: 9480802315/9480805353)ಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News