×
Ad

ಕ್ರಿಯಾಶೀಲ ಬದುಕಿನ ತಂತ್ರವೇ ಆತ್ಮಹತ್ಯೆ ತಡೆಯುವ ಮಂತ್ರ : ಪದ್ಮನಾಭ ಪೈ

Update: 2023-09-09 19:51 IST

ಮಂಗಳೂರು, ಸೆ.9: ಇಂದಿನ ಯುವಜನತೆ ಮತ್ತು ವಿದ್ಯಾರ್ಥಿಗಳು ಶೈಕ್ಷಣಿಕ ಉದ್ದೇಶ, ಗುರಿಯನ್ನು ಈಡೇರಿಸಿಕೊಳ್ಳುವ ಧಾವಂತದಲ್ಲಿ ಕೆಲವೊಮ್ಮೆ ಮಾನಸಿಕ ಒತ್ತಡಕ್ಕೆ ಒಳಗಾಗಿ ಅಮೂಲ್ಯ ಬದುಕನ್ನು ಕೊನೆಗೊಳಿಸುವ ಯೋಚನೆಗೆ ಒಳಗಾಗುತ್ತಾರೆ. ತನ್ನ ಕೆಲಸದಲ್ಲಿ ಆದ ಸೋಲನ್ನೆ ಜೀವನದ ಸೋಲು ಎಂಬುದಾಗಿ ಭಾವಿಸಿಕೊಂಡು ಅತಂತ್ರ ಮನಸ್ಥಿತಿಯನ್ನು ನಿರ್ಮಿಸಿಕೊಂಡು ಆತ್ಮಹತ್ಯೆಯ ಕಡೆ ಹೆಜ್ಜೆ ಹಾಕುತ್ತಿರುವುದು ಆರೋಗ್ಯಪೂರ್ಣ ವ್ಯಕ್ತಿತ್ವದ ಲಕ್ಷಣವಲ್ಲ. ಇದರಿಂದ ಹೊರಗೆ ಬರಬೇಕಾದರೆ ಸುವಿಚಾರಗಳನ್ನು ಬೆಳೆಸಿಕೊಂಡು ಬದುಕನ್ನು ಕ್ರಿಯಾಶೀಲಗೊಳಿಸುವ ತಂತ್ರ ಬೆಳೆಸಿಕೊಳ್ಳಬೇಕು ಎಂದು ಕೆನರಾ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಉಪಾಧ್ಯಕ್ಷ ಎಂ.ಪದ್ಮನಾಭ ಪೈ ಹೇಳಿದರು.

ವಿಶ್ವ ಆತ್ಮಹತ್ಯೆ ತಡೆ ದಿನದ ಅಂಗವಾಗಿ ನಗರದ ಕೆನರಾ ಪದವಿಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ನಡೆದ ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ಜಾಥವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕೆನರಾ ಪ್ರೌಢಶಾಲೆಗಳು, ಪದವಿ ಪೂರ್ವ, ಪದವಿ ಕಾಲೇಜುಗಳ ಆವರಣದಿಂದ ಹೊರಟ ಜಾಥಾವು ನಗರದ ಅಮ್ಮೆಂಬಳ ಸುಬ್ಬರಾವ್ ಪೈ ರಸ್ತೆ, ನವಭಾರತ ವೃತ್ತ, ಬಂಟ್ಸ್ ಹಾಸ್ಟೆಲ್ ವೃತ್ತ, ಮಹಾತ್ಮ ಗಾಂಧಿ ರಸ್ತೆಯಾಗಿ ಕೆನರಾ ಪದವಿ ಕಾಲೇಜಿನ ಆವರಣದಲ್ಲಿ ಸಮಾವೇಶಗೊಂಡಿತು.

ಕೆನರಾ ಹೈಸ್ಕೂಲ್‌ನ ಆಪ್ತ ಸಮಾಲೋಚಕಿ ಮಮತಾ ಭಂಡಾರಿ,ಕೆನರಾ ಆಡಳಿತ ಮಂಡಳಿಯ ಸಹ ಖಜಾಂಚಿ ಜಗನ್ನಾಥ್ ಕಾಮತ್, ಜಂಟಿ ಕಾರ್ಯದರ್ಶಿ ಸುರೇಶ್ ಕಾಮತ್, ಗೋಪಾಲಕೃಷ್ಣ ಶೆಣೈ, ಕೆನರಾ ವಿಕಾಸ ಕಾಲೇಜಿನ ಸಂಯೋಜಕ ಬಸ್ತಿ ಪುರುಷೋತ್ತಮ ಶೆಣೈ, ಕೆನರಾ ಪದವಿ ಕಾಲೇಜಿನ ಮ್ಯಾನೇಜರ್ ಶಿವಾನಂದ ಶೆಣೈ, ಆಡಳಿತ ಮಂಡಳಿಯ ಸದಸ್ಯ ನರೇಶ್ ಶೆಣೈ, ಉರ್ವದ ಕೆನರಾ ಆಂಗ್ಲ ಪ್ರಾಥಮಿಕ ಹೈಸ್ಕೂಲ್ ಮ್ಯಾನೇಜರ್ ಯೋಗೀಶ್ ಕಾಮತ್, ಆಡಳಿತ ಅಧಿಕಾರಿ ಡಾ. ದೀಪ್ತಿ ನಾಯಕ್, ಪಿಆರ್‌ಒ ಉಜ್ವಲ್ ಮಲ್ಯ, ಪಾಲ್ಗೊಂಡಿದ್ದರು.

ಅನ್ ಮೇರಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ರಕ್ಷಿತಾ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News