ಅಡ್ಕರೆಪಡ್ಪು: ಗ್ರೀನ್ ವೀವ್ ಸಂಸ್ಥೆಯಲ್ಲಿ ಪ್ರೇರಣಾ ತರಬೇತಿ
Update: 2025-02-03 14:27 IST
ದೇರಳಕಟ್ಟೆ: ಜಮೀಯ್ಯತುಲ್ ಫಲಾಹ್ ಗ್ರೀನ್ ವೀವ್ ವಿದ್ಯಾಸಂಸ್ಥೆ ಅಡ್ಕರೆಪಡ್ಪು ಕೊಣಾಜೆ ಇಲ್ಲಿನ ಎಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ತರಬೇತಿಯನ್ನು ಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.
ಸಂಪನ್ಮೂಲ ವ್ಯಕ್ತಿಯಾದ ರಝಾಕ್ ಮಾಸ್ಟರ್ ಅನಂತಾಡಿರವರು ಮಾತನಾಡಿ, ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಪರಿಶ್ರಮದೊಂದಿಗಿನ ತಯಾರಿ ಅತ್ಯಗತ್ಯ ಎಂದು ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬುವುದರೊಂದಿಗೆ ಉತ್ತಮ ಮಾಹಿತಿಯನ್ನು ನೀಡಿದರು.
ಸಂಸ್ಥೆಯ ಸಂಚಾಲಕರಾದ ಅಬ್ದುನ್ನಾಸರ್ ಕೆ.ಕೆ ರವರು ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸ, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಅಬೂಬಕ್ಕರ್ ಕೆ. ಸ್ವಾಗತಿಸಿದರು. ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ನಮಿತಾ ಬಿ.ಎನ್. ವಂದಿಸಿದರು. ಉಪನ್ಯಾಸಕಿ ಅಸ್ಮಾ ಕಾರ್ಯಕ್ರಮ ನಿರೂಪಿಸಿದರು.