ಅಡ್ಯಾರ್ ಕಣ್ಣೂರು: ಎ.20ರಂದು 'ಫ್ಯಾಮಿಲಿ ಕಾನ್ಫರೆನ್ಸ್'
Update: 2025-04-19 14:39 IST
ಮಂಗಳೂರು: ಕರ್ನಾಟಕ ಸಲಫಿ ಅಸೋಸಿಯೇಶನ್ ಮತ್ತು ವಿಸ್ಡಮ್ ಇದರ ಜಂಟಿ ಆಶ್ರಯದಲ್ಲಿ ಎ.20ರಂದು ಸಂಜೆ 4ರಿಂದ ರಾತ್ರಿ 10ರ ತನಕ ಅಡ್ಯಾರ್ ಕಣ್ಣೂರಿನಲ್ಲಿ 'ವಿಶ್ವಾಸ ಪರಿಶುದ್ಧತೆ, ಸಂತೃಪ್ತ ಕುಟುಂಬ' ಎಂಬ ಧೈಯ ವಾಕ್ಯದಡಿಯಲ್ಲಿ 'ಫ್ಯಾಮಿಲಿ ಕಾನ್ಫರೆನ್ಸ್' ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಹುಸೈನ್ ಸಲಫಿ ಶಾರ್ಜಾ, ಮುಜಾಹಿದ್ ಬಾಲುಶೇರಿ, ಶಿಹಾಬ್ ಎಡಕ್ಕರ, ಟಿ.ಕೆ.ಅಶ್ರಫ್, ಡಾ.ಮುಹಮ್ಮದ್ ಹಫೀಝ್, ಯಾಸಿರ್ ಅಲ್ ಹಿಕಮಿ, ಅಬ್ದುಲ್ಲಾ ಫರ್ಹಾನ್ ಮುಂತಾದವರು ವಿಷಯ ಮಂಡಿಸಲಿದ್ದಾರೆ.
ಮಹಿಳೆಯರಿಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ಫ್ಯಾಮಿಲಿ ಕಾನ್ಫರೆನ್ಸ್ ಸ್ವಾಗತ ಸಮಿತಿಯ ಅಧ್ಯಕ್ಷ ಮುಹಮ್ಮದ್ ಬಜಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.